ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ಹಿಂದೂ-ಮುಸಲ್ಮಾನರ ನಡುವೆ ಮನಸ್ತಾಪ ನಡೆಯುತ್ತಿದೆ. ಮೀನು ಮಾರುಕಟ್ಟೆಗೆ ಮುಸಲ್ಮಾನರು ಯಾರು ಬರುತ್ತಿಲ್ಲ. ಮೀನು ಖರೀದಿ ಮಾಡುತ್ತಿಲ್ಲ.
ಅಕ್ಟೋಬರ್ 1 ರಂದು ಹಿಂದೂ ಸಂಘಟನೆಗಳು ಬೈಂದೂರಿನಲ್ಲಿ ಪ್ರತಿಭಟನೆ ಮಾಡಿದ್ದವು. ಒಂದು ದಿನ ಯಾವುದೇ ಮೀನುಗಾರಿಕಾ ಚಟುವಟಿಕೆಗಳನ್ನು ಮಾಡದೆ ಬಂದ್ ಆಚರಿಸಿದ್ದರು. ಆ ಘಟನೆಗೆ ಮುಸಲ್ಮಾನರು ಮೀನು ಖರೀದಿಸದೆ ಅಸಹಕಾರ ನೀಡುತ್ತಿದ್ದಾರೆ. ಗಂಗೊಳ್ಳಿಯಲ್ಲಿ ಗೋವು ಹತ್ಯೆ ಖಂಡಿಸಿ ಪ್ರತಿಭಟನೆ ನಡೆದಿತ್ತು. ಈ ಸಂದರ್ಭದಲ್ಲಿ ಸುಮಾರು ನಾಲ್ಕು ಸಾವಿರ ಮಂದಿ ಮೀನುಗಾರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಒಳಗಡೆ ಇರೋ ವಸ್ತುಗಳನ್ನು ನೋಡಿ ರೆಸಿಪಿ ವಿವರ ನೀಡಲಿದೆ ಅಮೆಜಾನ್ ಸ್ಮಾರ್ಟ್ ಫ್ರಿಡ್ಜ್
ಗೋಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಯಲ್ಲಿ ಗೋಕಳ್ಳರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಪ್ರತಿಭಟನೆಗೆ ಪ್ರತಿಕ್ರಿಯೆ ಎಂಬಂತೆ ಮೀನು ಮಾರುಕಟ್ಟೆಯಿಂದ ಮುಸಲ್ಮಾನರು ದೂರವುಳಿದಿದ್ದಾರೆ. ಮೀನು ಖರೀದಿ ಮಾಡಲು ಯಾರೂ ಬರುತ್ತಿಲ್ಲ. ಬಂದರಿನಲ್ಲಿ ಮೀನು ಖರೀದಿಗೂ ಮುಸಲ್ಮಾನರು ಹಿಂದೇಟು ಹಾಕುತ್ತಿದ್ದಾರೆ. ಇದನ್ನೂ ಓದಿ: ಟಯರ್ ಸ್ಫೋಟಗೊಂಡು ತಾಯಿ, ಮಗ ಕಾರಿನಲ್ಲೇ ದುರ್ಮರಣ
ಈ ವಿಚಾರಕ್ಕೆ ಕುರಿತಂತೆ ಮೊಗವೀರ ಮಹಿಳೆಯರು ಗಂಗೊಳ್ಳಿ ಪೊಲೀಸ್ ಠಾಣೆಗೆ ಭೇಟಿಕೊಟ್ಟು ದೂರು ನೀಡಿದ್ದಾರೆ. ಮಾರುಕಟ್ಟೆಯ ಹೊರಗೆ ಕೆಲ ಯುವಕರು ನಿಂತು ಮೀನು ಖರೀದಿಸಬಾರದು ಎಂದು ಒತ್ತಾಯಿಸಿ ವಾಪಸ್ ಕಳುಹಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ, ವ್ಯಾಪಾರಕ್ಕೆ ಅಡ್ಡಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಗಂಗೊಳ್ಳಿ ಮತ್ತು ಬೈಂದೂರು ಪೊಲೀಸರು ಎರಡು ಬಾರಿ ಶಾಂತಿ ಸಭೆಯನ್ನು ಮಾಡಿದ್ದರು ಹಿಂದೂ ಮತ್ತು ಮುಸಲ್ಮಾನರ ನಡುವೆ ಶೀತಲ ಸಮರ ಏರ್ಪಟ್ಟಿದೆ.