ಕೋಲ್ಕತ್ತಾ: ಮುಸ್ಲಿಂ ಸಮುದಾಯದ ಜನರನ್ನೇ ಹೊಂದಿರುವ ಕೋಲ್ಕತ್ತಾದ (Kolkata) ಕ್ಲಬ್ ಅಲಿಮುದ್ದೀನ್ ಸ್ಟ್ರೀಟ್‍ನ 13/A ಷರೀಫ್ ಲೇನ್‍ನಲ್ಲಿ ವಾಸಿಸುವ ಒಂದೇ ಒಂದು ಹಿಂದೂ ಕುಟುಂಬದ (Hindu family) ಸಂತೋಷಕ್ಕಾಗಿ ಅಲ್ಲಿದ್ದ ಮುಸ್ಲಿಂ ಸಮುದಾಯದ (Muslim community) ಎಲ್ಲಾ ಸದಸ್ಯರು ದುರ್ಗಾ ಪೂಜೆಯನ್ನು (Durga Puja) ಆಯೋಜಿಸಿದೆ.
16 ವರ್ಷಗಳ ಹಿಂದೆ ಕಾರಣಾಂತರಗಳಿಂದ ಹಲವಾರು ಹಿಂದೂ ಕುಟುಂಬಗಳು ಏರಿಯಾ ಬಿಟ್ಟು ಹೋದ ಬಳಿಕ ಈ ಪ್ರದೇಶದಲ್ಲಿ ದುರ್ಗಾ ಪೂಜೆ ಆಚರಣೆಗಳು ನಿಂತುಹೋಗಿದ್ದವು. ಆದರೆ ಕಳೆದ ವರ್ಷ ಮುಸ್ಲಿಂ ಸಮುದಾಯದ ಯುವಕರು ಇಲ್ಲಿ ವಾಸಿಸುವ ಹಿಂದೂ ಕುಟುಂಬಕ್ಕೆ ಈ ವರ್ಷ ದಶಕಗಳ ಹಿಂದೆ ನಡೆಸುತ್ತಿದ್ದ ದುರ್ಗಾಪೂಜೆ ಆಚರಣೆಯನ್ನು ಪುನಃ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
Advertisement
Advertisement
ಸಯಂತ ಸೇನ್ ಅವರ ಕುಟುಂಬವು ಈ ಪ್ರದೇಶದಲ್ಲಿ ವಾಸಿಸುವ ಏಕೈಕ ಹಿಂದೂ ಬಂಗಾಳಿ ಕುಟುಂಬವಾಗಿದೆ ಮತ್ತು ಅವರ ತಂದೆಯು ದುರ್ಗಾ ಪೂಜೆಯ ಮೊದಲ ಕೆಲವು ಸಂಘಟಕರಲ್ಲಿ ಒಬ್ಬರು. ಇದನ್ನೂ ಓದಿ: ಖ್ಯಾತ ನಟಿ ಆಶಾ ಪರೇಖ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
Advertisement
Advertisement
ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಯುವಕನೊಬ್ಬ, ತಮ್ಮ ಕಾಲೋನಿಯಲ್ಲಿ ದುರ್ಗಾಪೂಜೆ ಆಚರಣೆಯನ್ನು ಪುನಃ ಮಾಡುತ್ತಿರುವುದು ಸಂತೋಷವಾಗುತ್ತಿದೆ. ದುರ್ಗಾ ಪೂಜೆ ಸ್ಥಗಿತಗೊಂಡಾಗ ನನಗೆ ಮೂರರಿಂದ ನಾಲ್ಕು ವರ್ಷ. ಇಲ್ಲಿ ದುರ್ಗಾ ಪೂಜೆಯ ಆಚರಣೆಗಳು ನಡೆಯುತ್ತಿದ್ದವು ಎಂದು ನನ್ನ ತಂದೆ ಹೇಳುತ್ತಿದ್ದನ್ನು ಕೇಳಿದ್ದೆ. ಆದರೆ ಹಿಂದೂಗಳು ಏರಿಯಾ ಬಿಟ್ಟು ಹೋದ ಬಳಿಕ ದುರ್ಗಾ ಪೂಜೆ ನಿಂತುಹೋಗಿತ್ತು. ಇದೀಗ ಮುಸ್ಲಿಮರು ಈ ಏರಿಯಾದಲ್ಲಿ ಮತ್ತೆ ದುರ್ಗಾ ಪೂಜೆಯನ್ನು ಆಯೋಜಿಸಿದ್ದಾರೆ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಹಾಸ್ಟೆಲ್ ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ರೆಕಾರ್ಡ್ ಮಾಡಿದ್ದವ ಅರೆಸ್ಟ್