ಮೈಸೂರು: ಮೋದಿ (Narendra Modi) ನಿಂತು ಭಾಷಣ ನಾಡುವ ಕೆಂಪು ಕೋಟೆ (Red Fort) ಯನ್ನು ಮುಸ್ಲಿಮರು ಕಟ್ಟಿಸಿದ್ದು ಇದನ್ನು ಪ್ರತಾಪ್ ಸಿಂಹ (Pratap Simha) ಒಡೆಸಿಬಿಡುತ್ತಾನಾ ಎಂದು ಸಂಸದರ ವಿರುದ್ಧ ಏಕ ವಚನದಲ್ಲಿಯೇ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಸಾಂಸ್ಕೃತಿಕ ನಗರಿ, ವಿದ್ಯಾನಗರಿ. ಇದನ್ನು ಸಂಸದ ಪ್ರತಾಪ್ ಸಿಂಹ ಅಜ್ಞಾನದ ಕಡೆ ಕರೆದುಕೊಂಡು ಹೋಗುತ್ತಿದ್ದಾನೆ. ಟಿಪ್ಪು (Tippu Sultan) ನಿಜ ಕನಸುಗಳು ಪುಸ್ತಕದಲ್ಲಿ ಟಿಪ್ಪುನಿನ ಬಗ್ಗೆ ಕೆಟ್ಟದಾಗಿ ತೋರಿಸಲಾಗಿದೆ. ಇದನ್ನು ತಡೆಯಲು ಕೋರ್ಟ್ ಮೊರೆ ಹೋಗುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಪ್ರತಾಪ್ ಸಿಂಹ, ಟಿಪ್ಪು ನಂಜುಡೇಶ್ವರನಿಗೆ ಕೊಟ್ಟ ಪಂಚ ವಜ್ರ ವಾಪಸ್ ಇಸ್ಕೋತ್ತಾನಾ..?. ಮೋದಿ ನಿಂತು ಭಾಷಣ ನಾಡುವ ಕೆಂಪು ಕೋಟೆಯನ್ನು ಮುಸ್ಲಿಮರು ಕಟ್ಟಿಸಿದ್ದು, ಇದನ್ನು ಪ್ರತಾಪ ಸಿಂಹ ಒಡೆಸಿಬಿಡುತ್ತಾನಾ. ಬಿಜೆಪಿಯವರು ಮುಸ್ಲಿಮರು ಗೌಡ್ರಿಗೆ ಜಗಳ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದರ ವಿರುದ್ಧ ಗರಂ ಆದರು. ಇದನ್ನೂ ಓದಿ; ಪ್ರತಾಪ್‌ಸಿಂಹನಿಗೆ ಬಸ್‌ನಿಲ್ದಾಣದ ಗುಂಬಜ್‌ಗಳೂ ಮುಸ್ಲಿಮರ ಮಸೀದಿಯೆಂತೆ ಕಾಣ್ತಿದೆ – ಸೇಠ್ ತಿರುಗೇಟು
ಇದೇ ವೇಳೆ ಟಿಪ್ಪು ಪ್ರತಿಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರತಿಮೆಗೆ ನಮ್ಮಲ್ಲಿ ಅವಕಾಶ ಇಲ್ಲ. ಪೂಜೆ ಮಾಡುವುದು, ಕುಂಕುಮ ಹಚ್ಚುವುದು ನಮ್ಮಲ್ಲಿ ಇಲ್ಲ. ಟಿಪ್ಪು ಪ್ರತಿಮೆ ಮಾಡುವ ಪ್ರಶ್ನೆಯೇ ಇಲ್ಲ. ತನ್ವೀರ್ ಸೇಠ್ (Tanveer Sait) ಗ ಏನೂ ಗೊತ್ತಿಲ್ಲ. ಬದಲಾಗಬೇಕು ಅಂತಾ ಧರ್ಮ ಬದಲಾಯಿಸಲು ಆಗಲ್ಲ. ಚುನಾವಣೆಗಾಗಿ ಧರ್ಮ ಬದಲಾವಣೆ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು.
ಟಿಪ್ಪು ಜಯಂತಿ ಮಾಡಿದ್ದೆ ದೊಡ್ಡ ತಪ್ಪು. ಮುಸ್ಲಿಮರಲ್ಲಿ ಜಯಂತಿ, ಮೆರವಣಿಗೆಗೆ ಅವಕಾಶವಿಲ್ಲ. ನಾನು ಟಿಪ್ಪು ಜಯಂತಿ ಬೇಡ ಎಂದು ಹೇಳಿದ್ದೆ. ಮತದ ಕಾರಣ ಟಿಪ್ಪು ಜಯಂತಿ ಮಾಡಿದರು. ಈಗ ಟಿಪ್ಪು ಪ್ರತಿಮೆ ಪ್ರಸ್ತಾಪವನ್ನು ನಮ್ಮ ಧರ್ಮ ಒಪ್ಪುವುದಿಲ್ಲ. ಮುಸ್ಲಿಮರಲ್ಲಿ ಎಲ್ಲೂ ಈ ರೀತಿ ಬದಲಾವಣೆಗೆ ಅವಕಾಶವೇ ಇಲ್ಲ ಎಂದರು. ಇದನ್ನೂ ಓದಿ: 100 ಅಡಿ ಎತ್ತರದ ಟಿಪ್ಪು ಪ್ರತಿಮೆ ಸ್ಥಾಪಿಸೋದು ನಿಶ್ಚಿತ: ತನ್ವೀರ್ ಸೇಠ್