ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕಿನಲ್ಲಿ ಹೊಸ ವಿವಾದ ತಲೆಯೆತ್ತಿದೆ. ಪಾರ್ಕಿನಲ್ಲಿ ಯೋಗ ಮಾಡುವುದು ಬೇಡ ಎಂದು ವಿರೋಧ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಯೋಗ ಮಾಡಲು ಅನುಮತಿ ನೀಡಿದರೆ ನಮಾಜ್‍ಗೂ ಅವಕಾಶ ಕೊಡಿ ಎಂದು ಬೇಡಿಕೆ ಕೇಳಿಬಂದಿದೆ.
ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದಿಂದ ಹುಲ್ಲು ಹಾಸಿನ ಮೇಲೆ ಪ್ರೀತಿ ಅವರು ಉಚಿತವಾಗಿ ಯೋಗ ತರಗತಿ ನೀಡುತ್ತಿದ್ದಾರೆ. ಈ ಖಾಸಗಿ ಯೋಗ ತರಗತಿಗೆ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹುಲ್ಲು ಹಾಸಿನ ಮೇಲೆ ಕ್ಲಾಸ್ ನಡೆಯುತ್ತದೆ. ಫ್ಲೆಕ್ಸ್ ಗಳನ್ನು ಪ್ರದರ್ಶನ ಮಾಡುತ್ತಾರೆ ಎಂದು ದೂರಿದ್ದಾರೆ. ಯೋಗ ನಡೆಸಲು ಅನುಮತಿ ನೀಡಿದರೆ ನಮಾಜ್ ಮಾಡಲು ಅವಕಾಶ ಕಲ್ಪಿಸಿ ಎಂದು ಕೇಳಿಕೊಂಡಿದ್ದಾರೆ.
Advertisement
Advertisement
ಯೋಗ ಮಾಡಲು ಅವಕಾಶ ಕೊಟ್ಟರೆ ಮುಸ್ಲಿಂ ಬಾಂಧವರು ನಮಾಜ್ ಮಾಡಲು ಅವಕಾಶ ಕೇಳುತ್ತಿದ್ದಾರೆ. ಹೀಗಾಗಿ ಉಚಿತ ಯೋಗ ಕ್ಲಾಸ್ ಬೇಡ ಎಂಬ ವಿರೋಧ ಎದುರಾಗಿದೆ ಕಬ್ಬನ್ ಪಾರ್ಕ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ತಿಳಿಸಿದ್ದಾರೆ.
Advertisement
Advertisement
ಈ ಬಗ್ಗೆ ಯೋಗ ತರಬೇತಿದಾರಾದ ಪ್ರೀತಿಯವರನ್ನು ಕೇಳಿದರೆ ಉಚಿತವಾಗಿ ಕ್ಲಾಸ್ ಮಾಡುತ್ತಿದ್ದೇನೆ. ಈ ಕ್ಲಾಸ್‍ಗೆ ವಿರೋಧ ಯಾಕೆ ಎನ್ನುವುದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಪ್ರತಿ ದಿನ ಬೆಳಿಗ್ಗೆ 6 ರಿಂದ 8 ಗಂಟೆಯವರೆಗೂ ನಡೆಯುವ ಈ ಕ್ಲಾಸ್‍ನಲ್ಲಿ ವಯೋವೃದ್ಧರು, ಯೋಗ ಆಸಕ್ತರು ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ.