ರಾಯಚೂರು: ಜಿಲ್ಲೆಯ ದೇವದುರ್ಗ (Devadurga) ಪಟ್ಟಣದ ಮುಸ್ಲಿಂ ಸಮುದಾಯದ ವ್ಯಕ್ತಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾನೆ.
ಅಯ್ಯಪ್ಪ ಮಾಲೆ ಧರಿಸಿದ ವ್ಯಕ್ತಿಯನ್ನು ದೇವದುರ್ಗ ಪಟ್ಟಣದ ಬಾಬು ಗೌರಂಪೇಟ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಹಸೆಮಣೆ ಏರಿದ ‘ಸರಿಯಾಗಿ ನೆನಪಿದೆ ನನಗೆ’ ಗಾಯಕ Armaan Malik
ಪ್ರತೀ ವರ್ಷ ಮಾಲೆ ಧರಿಸಿ ಅಯ್ಯಪ್ಪನ ದರ್ಶನಕ್ಕೆ ತೆರಳುವ ಬಾಬು ಸರತಿ ಸಾಲಲ್ಲಿ ನಿಂತು ಅಯ್ಯಪ್ಪನ ದರ್ಶನ ಪಡೆದು ಪುನೀತರಾಗಿ ಬಂದಿದ್ದಾರೆ. ಧರ್ಮದ ಬೇಧ ಭಾವವಿಲ್ಲದೆ ಅಯ್ಯಪ್ಪ ಸ್ವಾಮಿಯನ್ನ ಪೂಜಿಸುವ ಬಾಬು ಕಳೆದ 10 ವರ್ಷಗಳಿಂದ ಮಾಲೆ ಧರಿಸಿ ಶಬರಿಮಲೆಗೆ ತೆರಳುತ್ತಿದ್ದಾರೆ.
ಸ್ಥಳೀಯ ಅಯ್ಯಪ್ಪ ಮಾಲಾಧಾರಿಗಳ ಜೊತೆ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಮುಗಿಸಿ ಬಂದಿದ್ದು, ಬಾಬು ಭಕ್ತಿ ಭಾವಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಸಿಡ್ನಿ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಆಡ್ತಾರಾ? – ಗೌತಮ್ ಗಂಭೀರ್ ಹೇಳಿದ್ದೇನು?