ಭೋಪಾಲ್: ಮಧ್ಯಪ್ರದೇಶದ (Madhya Pradesh) ಛತ್ತರ್‌ಪುರ ಜಿಲ್ಲೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು (Muslim Women) ಗೋಶಾಲೆ (Cow Shelter) ನಡೆಸುತ್ತಿದ್ದ ಕಾರಣಕ್ಕೆ ಆಕೆಯನ್ನು ಸಮುದಾಯದವರು ಬಹಿಷ್ಕರಿಸಿದ್ದಾರೆ.
ಮರ್ಜೀನಾ ಬಾನೊ ಅವರು ‘ನಂದಿ ಗ್ರಾಮ’ ಎಂಬ ಗೋಶಾಲೆ ನಡೆಸುತ್ತಿದ್ದಾರೆ. ಇದರಲ್ಲಿ ಅವರು ಹಸುಗಳು, ಎತ್ತುಗಳು ಮತ್ತು ಕರುಗಳು ಸೇರಿದಂತೆ 18 ಜಾನುವಾರುಗಳನ್ನು ಸಾಕುತ್ತಿದ್ದಾರೆ. ಹೀಗಾಗಿ ಸಮುದಾದವರು ಆಕೆಯನ್ನು ಬಹಿಷ್ಕರಿಸಿದ್ದಾರೆ. ಮದುವೆ ಮತ್ತು ಇತರ ಕಾರ್ಯಕ್ರಮಗಳು ಸೇರಿದಂತೆ ಯಾವುದೇ ಸಾಮಾಜಿಕ ಕಾರ್ಯಕ್ರಮಗಳಿಗೆ ಮಹಿಳೆಯನ್ನು ಆಹ್ವಾನಿಸುತ್ತಿಲ್ಲ. ಇದನ್ನೂ ಓದಿ: ರಾಜೌರಿ ಉಗ್ರರ ದಾಳಿ ಪ್ರಕರಣ – 50 ಜನರನ್ನು ವಶಕ್ಕೆ ಪಡೆದು ವಿಚಾರಣೆ
Advertisement
Advertisement
ಬಾನೊ ಅವರು ಕೆಲವರ ಆರ್ಥಿಕ ನೆರವು ಮತ್ತು ತನ್ನ ವೈಯಕ್ತಿಕ ಖರ್ಚಿನಿಂದ ಗೋಶಾಲೆ ನಡೆಸುತ್ತಿದ್ದಾರೆ. “ನಾಲ್ಕು ವರ್ಷಗಳ ಹಿಂದೆ ನಾನು ಹಸುವಿಗೆ ಆಹಾರ ನೀಡಿದ್ದೆ. ನಂತರ ಇಲ್ಲಿಯವರೆಗೆ ಸೇವೆಯನ್ನು ಮುಂದುವರೆಸಿದೆ. ನಾನು ಮೊದಲ ಲಾಕ್‌ಡೌನ್ ಸಮಯದಲ್ಲಿ ಬೀದಿ ಹಸುಗಳನ್ನು ಸಾಕಿದ್ದೇನೆ. ಈಗ ಗೋಶಾಲೆ ನಡೆಸುತ್ತಿದ್ದೇನೆ. ನನ್ನ ಮಗಳು ಜೈನಮ್ ಖಾನ್ ಈ ಕೆಲಸದಲ್ಲಿ ನನಗೆ ಸಹಾಯ ಮಾಡುತ್ತಾಳೆ” ಎಂದು ಬಾನೊ ಹೇಳಿಕೊಂಡಿದ್ದಾರೆ.
Advertisement
Advertisement
ಲಕ್ನೋದ ಅಲಿ ಹಸ್ನೇನ್ ಅಬಿದಿ ಅವರು 6,000 ಪ್ರಾಣಿಗಳನ್ನು ಸಾಕುತ್ತಿದ್ದರು. ಅವರ ಇಡೀ ಮನೆ ಪ್ರಾಣಿಗಳ ರಕ್ಷಣೆಗೆ ಮೀಸಲಾಗಿತ್ತು. ಅಬಿದಿ ಅವರ ಮನೆ ಪ್ರಾಣಿ, ಪಕ್ಷಿ, ಹಾವುಗಳ ಕೇಂದ್ರವಾಗಿತ್ತು. ಅವರು ನಮಗೆ ಸ್ಫೂರ್ತಿ ಎಂದು ಬಾನೊ ತಿಳಿಸಿದ್ದಾರೆ. ಇದನ್ನೂ ಓದಿ: ಮ್ಯೂಸಿಕ್ ಸೌಂಡ್ ಕಡಿಮೆ ಮಾಡಿ ಎಂದಿದ್ದಕ್ಕೆ ಸೇನಾಧಿಕಾರಿ ಕಾರಿಗೆ ಬೆಂಕಿ ಇಟ್ಟವರ ಹೋಟೆಲ್‌ಗೆ ಬಿತ್ತು ಬೀಗ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k