ಚಿಕ್ಕಬಳ್ಳಾಪುರ: ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವ ವೇಳೆ ವೈದ್ಯರೊಬ್ಬರು ಮುಸ್ಲಿಂ ಮಹಿಳೆಯಿಂದ ಕೃಷ್ಣ ಕೃಷ್ಣ ಅಂತ ಹೇಳಿಸಿ ಶಸ್ತ್ರಚಿಕಿತ್ಸೆ ಮಾಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
ಬೆಂಗಳೂರು ಮೂಲದ ನಾಸೀಮಾ ಬಾನು ಸೊಣ್ಣಶೆಟ್ಟಿಹಳ್ಳಿಯಲ್ಲಿರುವ ತಮ್ಮ ಅಜ್ಜಿ ಮನೆಗೆ ಹೋಗಿದ್ದರು. ಪ್ರತಿ ತಿಂಗಳು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಯುತ್ತದೆ. ಆದ್ದರಿಂದ ನಾಸೀಮಾ ಬಾನು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ದಾಖಲಾಗಿದ್ದು, ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಲು ಬೆಂಗಳೂರಿನಿಂದ ಡಾ. ರಾಮಕೃಷ್ಣಪ್ಪ ಬಂದಿದ್ದರು.
Advertisement
Advertisement
ವೈದ್ಯರು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡುವ ಸಂದರ್ಭದಲ್ಲಿ ಅಲ್ಲಾ ಅಲ್ಲಾ ಅಂತ ನೆನೆಯುತ್ತಿದ್ದ ನಸೀಮಾ ಬಾನುಗೆ ಅಲ್ಲಾ ಅಲ್ಲಾ ಅನ್ನಬೇಡ. ಕೃಷ್ಣ ಕೃಷ್ಣ ಅಂತಾ ಹೇಳು ಎಂದು ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ನಸೀಮಾ ಬಾನು ನಿರಾಕರಿಸದ್ದಕ್ಕೆ ಶಸ್ತ್ರಚಿಕಿತ್ಸೆ ಮಾಡುವುದಿಲ್ಲ ಎಂದು ವೈದ್ಯರು ಹೇಳಿದ್ದು, ಒತ್ತಡಕ್ಕೆ ಮಣಿದ ನಸೀಮಾಬಾನು ಕಷ್ಣ ಕೃಷ್ಣ ಎಂದು ಹೇಳಿದ್ದಾರೆ. ನಂತರ ವೈದ್ಯರು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎನ್ನಲಾಗಿದೆ.
Advertisement
ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಆಸ್ಪತ್ರೆಯಿಂದ ಬಂದ ಬಳಿಕ ನಸೀಮಾ ಬಾನು ವೈದ್ಯ ರಾಮಕೃಷ್ಣ ವಿರುದ್ಧ ದೂರು ದಾಖಲಿಸಿದ್ದರೆ. ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಚಿಂತಾಮಣಿ ನಗರ ಪೊಲೀಸರಿಗೆ ವೈದ್ಯರ ವಿರುದ್ಧ ದೂರು ನೀಡಿದ್ದಾರೆ. ಈ ಘಟನೆ ಸಂಬಂಧ ನಾಸೀಮಾ ಸಹೋದರಿ ಆಸ್ಪತ್ರೆಯ ಹಿರಿಯ ವೈದ್ಯರ ಬಳಿ ನಡೆದ ಘಟನೆಯ ಬಗ್ಗೆ ದೂರನ್ನ ಹೇಳಿದ್ದಾರೆ.