ಲಕ್ನೋ: ಮೊನ್ನೆಯಷ್ಟೇ ಅಸ್ಸಾಂನ ಕಾಂಗ್ರೆಸ್ ಅಧ್ಯಕ್ಷರು ಕೃಷ್ಣರುಕ್ಮಿಣಿ ಪ್ರೇಮಗಾಥೆಗೆ ಲವ್ ಜಿಹಾದ್ ಟಚ್ ನೀಡಿದ್ದರು. ಇದೀಗ ಮಥುರಾದಲ್ಲಿ ಮುಸ್ಲಿಂ ಮಹಿಳೆಯೊಬ್ಬರು (Mathura Muslim Women) ಶ್ರೀಕೃಷ್ಣನ ಭಕ್ತಿಯಲ್ಲಿ ತೇಲುತ್ತಿದ್ದಾರೆ.
Advertisement
ಮೊರಾದಾಬಾದ್‌ನ ಶಬ್ನಂ ತಂದೆ ಲೋಹದ ವಿಗ್ರಹಗಳನ್ನ ಕಡೆಯುತ್ತಾರೆ. ಹೀಗಾಗಿ ಚಿಕ್ಕವಯಸ್ಸಿನಲ್ಲೇ ಹಿಂದೂ ದೇವತೆಗಳ ಮೇಲೆ ಶಬ್ನಂಗೆ ಆರಾಧನೆಯ ಭಾವ ಮೂಡಿತ್ತು. ಇದೇ ಈಕೆಯನ್ನು ಮಥುರಾದ ಬೃಂದಾವನಕ್ಕೆ ಪಯಣಿಸುವಂತೆ ಮಾಡಿದೆ. 2005ರಲ್ಲಿ ಈಕೆಗೆ ಗಂಡ ತಲಾಖ್ ನೀಡಿದ್ದ. ನಂತರ ದೆಹಲಿಯಲ್ಲಿ ಕೆಲ ಕಾಲ ಲೇಡಿ ಬೌನ್ಸರ್ ಆಗಿ ಶಬ್ನಂ ಕೆಲಸ ಮಾಡಿದ್ದರು. ಆದ್ರೆ ಕೃಷ್ಣನ ಕಡೆ ಸೆಳೆತ ಹೆಚ್ಚಾಗಿ 4 ತಿಂಗಳಿಂದ ಕುಟುಂಬ ಬಂಧಗಳನ್ನು ತೊರೆದ ಶಬ್ನಂ ಮಥುರಾದಲ್ಲಿ ಕೃಷ್ಣ (Lord Krishna) ಭಕ್ತಿಯಲ್ಲಿ ಲೀನರಾಗಿದ್ದಾರೆ.
Advertisement
Advertisement
ಅಂತಾರಾಷ್ಟ್ರೀಯ ಷಡ್ಯಂತ್ರ:
ಪಾಕಿಸ್ತಾನದ ಪ್ರಿಯಕರನನ್ನ ಮದ್ವೆಯಾಗಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಅಂಜು ಪ್ರಕರಣ ಒಂದು ಅಂತಾರಾಷ್ಟ್ರೀಯ ಷಡ್ಯಂತ್ರ ಎಂದು ಮಧ್ಯಪ್ರದೇಶದ ಬಿಜೆಪಿ ಸಚಿವ ನರೋತ್ತಮ್ ಮಿಶ್ರಾ ವ್ಯಾಖ್ಯಾನಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್ – ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ?
Advertisement
ಫಾತಿಮಾ ಆಗಿ ಬದಲಾದ ಅಂಜುಗೆ ಅಲ್ಲಿನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಭೂಮಿ ಮತ್ತು ನಗದು ಪುರಸ್ಕಾರ ನೀಡಿದ್ದನ್ನು ಪ್ರಸ್ತಾಪಿಸಿದ ನರೋತ್ತಮ್ ಮಿಶ್ರಾ ಅಂತಾರಾಷ್ಟ್ರೀಯ ಸಂಚಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ. ಇದನ್ನೂ ಓದಿ: ಇಡಿಯಿಂದ ಲಾಲು ಪ್ರಸಾದ್ ಯಾದವ್ ಕುಟುಂಬದ ಆಸ್ತಿ ಜಪ್ತಿ
Web Stories