ಕಲಬುರಗಿ: ಜಿಲ್ಲೆಯ ನೂತನ ಪಾಲಿಕೆ ಕಟ್ಟಡದ ಮೇಲೆ ಉರ್ದು ನಾಮಫಲಕ ಹಾಕುವಂತೆ ಆಗ್ರಹಿಸಿ ಪ್ರತಿಭಟನೆ ನಡೆದಿದೆ.
ಮುಸ್ಲಿಂಲಿಗ್ ವೆಲ್‍ಫೆರ್ ಸೊಸೈಟಿ ಸಂಘಟನೆ ಕಾರ್ಯಕರ್ತರು ಮೇಯರ್ ಶರಣು ಮೋದಿ ಅವರ ಕಾರಿನ ಮೇಲೆ ಕಪ್ಪುಬಣ್ಣ ಚೆಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಇಪ್ಪತ್ತಕ್ಕೂ ಅಧಿಕ ಕಾರ್ಯಕರ್ತರು ಮೇಯರ್ ಕಚೇರಿ ನುಗ್ಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ನೂತನ ಕಟ್ಟಡದ ಮೇಲೆ ಉರ್ದು ನಾಮಫಲಕ ಹಾಕುವಂತೆ ಆಗ್ರಹಿಸಿ ಈ ಪ್ರತಿಭಟನೆ ನಡೆಸುತ್ತಿದ್ದು, ಒಂದು ವೇಳೆ ಉರ್ದು ನಾಮಫಲಕ ಹಾಕದಿದ್ರೆ ಕನ್ನಡ ಮತ್ತು ಇಂಗ್ಲಿಷ್ ನಾಮಫಲಕ ತೆಗೆಯುವಂತೆ ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರದಿಂದ ವೋಟ್ ಬ್ಯಾಂಕ್ ಪಾಲಿಟಿಕ್ಸ್?: ಕಲುಬುರಗಿ ಬಸ್ ಸ್ಟಾಪ್ ನಲ್ಲಿ ಉರ್ದು ನಾಮಫಲಕ