ಚಿಕ್ಕಮಗಳೂರು: ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹುಟ್ಟೂರು ಚಿಕ್ಕಮಗಳೂರು ತಾಲೂಕಿನ ಚಿಕ್ಕಮಾಗರಹಳ್ಳಿ ಗ್ರಾಮದಲ್ಲೂ ಮುಸ್ಲಿಂ ಬ್ಯಾನ್ ಕೂಗು ಜೋರಾಗಿದೆ.
ಭಾನುವಾರದಿಂದ ಆರಂಭವಾದ ದೇವೀರಮ್ಮನ ಸುಗ್ಗಿ ಹಬ್ಬಕ್ಕೆ ಮುಸ್ಲಿಮರಿಗೆ ವ್ಯಾಪಾರ ನಡೆಸಲು ಅವಕಾಶವಿಲ್ಲ ಎಂದು ಊರಿನ ಆರಂಭದಲ್ಲೇ ಬೋರ್ಡ್ ಹಾಕಿದ್ದಾರೆ. ಜಾತ್ರೆ ಇನ್ನೊಂದು ವಾರಗಳ ಕಾಲ ನಡೆಯಲಿದೆ. ಗುರುವಾರ ಜಾತ್ರೆ ನಡೆಯಲಿದ್ದು, ಜಾತ್ರೆಗೆ ಸಾವಿರಾರು ಜನ ಸೇರುತ್ತಾರೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರನ್ನು ಇನ್ನು ಯಾರಿಂದಲೂ ಓಡಿಸಲು ಸಾಧ್ಯವಿಲ್ಲ: ಮೋಹನ್ ಭಾಗವತ್
Advertisement
Advertisement
ಈ ಬಾರಿಯ ಸುಗ್ಗಿ ಹಬ್ಬಕ್ಕೆ ಮುಸ್ಲಿಮರಿಗೆ ನಮ್ಮ ಊರಿನಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶವಿಲ್ಲವೆಂದು ಹಳ್ಳಿಯ ದ್ವಾರದ ಬಾಗಿಲಿನಲ್ಲೇ ಬ್ಯಾನರ್ ಹಾಕಿದ್ದಾರೆ. ಈ ದೇಶದ ಕಾನೂನನ್ನು ಗೌರವಿಸದ, ನಾವು ಪೂಜಿಸುವ ಗೋವುಗಳನ್ನ ಕಡಿದು ಕೊಲ್ಲುವ ಹಾಗೂ ದೇಶದ ಅಖಂಡತೆಗೆ ಸಾವಲು ಎಸೆಯುವ ಮುಸ್ಲಿಂ ಗೋಕಟುಕರ ಜೊತೆ ನಾವು ವ್ಯವಹರಿಸುವುದಿಲ್ಲ ಹಾಗೂ ಅವರು ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಊರಿನ ಮುಂದೆಯೇ ದೊಡ್ಡ ಬೋರ್ಡ್ ಹಾಕಿದ್ದಾರೆ.
Advertisement
ಚಿಕ್ಕಮಾಗರವಳ್ಳಿ, ದೊಡ್ಡಮಾಗರವಳ್ಳಿ, ದೋಣಗೂಡಿಗೆ, ಸಾರಳ್ಳಿ ಹಾಗೂ ಹಳಿಯೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳೆಲ್ಲಾ ಸೇರಿ ಈ ಜಾತ್ರೆ ನಡೆಸುತ್ತಿದ್ದು, ಈವರಗೆ ಮುಸ್ಲಿಮರು ಇಲ್ಲಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದರು. ಈ ಬಾರಿ ಈ ಜಾತ್ರೆಗೆ ಮುಸ್ಲಿಮರಿಗೆ ಅವಕಾಶವಿಲ್ಲದಂತಾಗಿದೆ. ಇದನ್ನೂ ಓದಿ: ಮಸೀದಿ ಸಮೀಪ ಹನುಮಾನ್ ಚಾಲೀಸಾ ಹಾಕಿದ ಎಂಎನ್‌ಎಸ್
Advertisement
ಪ್ರತಿ ವರ್ಷ ಈ ಜಾತ್ರೆಯಲ್ಲಿ ಹತ್ತಾರು ಮುಸ್ಲಿಮರು ವಿವಿಧ ರೀತಿಯ ಅಂಗಡಿ ಹಾಕಿ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಆದರೆ, ಈ ಬಾರಿ ಹಿಜಬ್ ವಿವಾದಕ್ಕೆ ಹೈಕೋರ್ಟ್ ನೀಡಿದ ತೀರ್ಪನ್ನ ಗೌರವಿಸದ ಹಿನ್ನೆಲೆ ಜಾತ್ರೆಯಲ್ಲಿ ಮುಸ್ಲಿಮರು ವ್ಯಾಪಾರ-ವಹಿವಾಟು ನಡೆಸದಂತಾಗಿದೆ.