ಬೆಂಗಳೂರು: ದೇವಾಲಯದ ವ್ಯಾಪ್ತಿಯಲ್ಲಿ ಹಿಂದೂಯೇತರರ ವ್ಯಾಪಾರ ನಿರ್ಬಂಧಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ಕಾಪು ಸೇರಿ ಹಲವೆಡೆ ಹಿಂದೂ ಜಾತ್ರೆಗಳಲ್ಲಿ ಹಿಂದೂಯೇತರರ ವರ್ತಕರಿಗೆ ಅಂಗಡಿ ತೆರೆಯಲು ಗುತ್ತಿಗೆ ನೀಡದಿರುವ ನಿರ್ಬಂಧ ಹಾಕುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ಒತ್ತಾಯ ಮಾಡಿದರು. ಇದನ್ನೂ ಓದಿ: ನಿಯಮವನ್ನು ಅಧಿಕಾರಿಗಳು ಸೇರಿಸಿರಬಹುದು: ಮಾಜಿ ಮುಜರಾಯಿ ಸಚಿವೆ ಸುಮಾ ವಸಂತ್
Advertisement
Advertisement
ಇದಕ್ಕೆ ಉತ್ತರ ನೀಡಿದ ಸಚಿವ ಮಾಧುಸ್ವಾಮಿ ರೂಲ್ ಆಫ್ ಲಾ ಮೇಲೆ ಸರ್ಕಾರ ನಡೆಯಲಿದೆ. 2002 ರಲ್ಲಿಯೇ ನಿಮ್ಮ ಸರ್ಕಾರ ಈ ಬಗ್ಗೆ ನಿಯಮ ಮಾಡಿದೆ. ದೇವಾಲಯ ಆಡಳಿತ ಮಂಡಳಿಯವರು ಈ ನಿಯಮ ಉಲ್ಲೇಖಿಸಿ ಹಿಂದೂಯೇತರರಿಗೆ ಮಳಿಗೆ ತೆರೆಯುವ ಗುತ್ತಿಗೆ ತಡೆದಿದ್ದಾರೆ. ಇದರಲ್ಲಿ ಸರ್ಕಾರದ ಯಾವುದೇ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ನೀವೇ ಮಾಡಿರುವ ಕಾಯ್ದೆಯಂತೆ ನಾವು ದೇವಾಲಯ ಆವರಣದಲ್ಲಿ ಹಿಂದೂಯೇತರರು ಮಳಿಗೆ ಗುತ್ತಿಗೆ ಪಡೆಯುವುದನ್ನು ತಡೆಯುತ್ತಿದ್ದರೆ ನೀವು ಹೇಗೆ ತಡೆಯುತ್ತೀರಿ ಎಂದು ಅಲ್ಲಿನ ಆಡಳಿಯ ಮಂಡಳಿಯವರು ಪ್ರಶ್ನೆ ಮಾಡುತ್ತಿದ್ದಾರೆ. ಆ ಜಾಗ ಬಿಟ್ಟು ಬೇರೆ ಕಡೆ ನಿರ್ಬಂಧ ಮಾಡಿದರೆ ಮಾತ್ರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.