ಬೆಂಗಳೂರು: ಕೆಲ ಕಡೆ ಧಾರ್ಮಿಕ ಕೇಂದ್ರಗಳಲ್ಲಿ ಕೆಲವು ಧರ್ಮದವರು ವ್ಯಾಪಾರ ಮಾಡಬಾರದು ಎಂದು ಬ್ಯಾನರ್ ಹಾಕುತ್ತಾರೆ. ಬ್ಯಾನರ್ ಹಾಕಿದವರು ಹೇಡಿಗಳು, ಕ್ರೂರಿಗಳು ಎಂದು ಶಾಸಕ ಯು.ಟಿ ಖಾದರ್ ವಿಧಾನಸಭೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರಕ್ಕೆ ನಿರ್ಬಂಧ ವಿಚಾರ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಶಾಸಕರು ಪ್ರಸ್ತಾಪಿಸಿದರು. ಈ ವೇಳೆ ಯು.ಟಿ ಖಾದರ್, ಧಾರ್ಮಿಕ ಕೇಂದ್ರಗಳಲ್ಲಿ ಕೆಲವು ಧರ್ಮದವರು ವ್ಯಾಪಾರ ಮಾಡಬಾರದು ಎಂದು ಬ್ಯಾನರ್ ಹಾಕುತ್ತಾರೆ. ಬ್ಯಾನರ್ ಹಾಕಿದವರು ಹೇಡಿಗಳು, ಕ್ರೂರಿಗಳು ಎಂದರು. ಇದನ್ನೂ ಓದಿ: ಬಿಜೆಪಿ ಸರ್ಕಾರ ಮೌನವಾಗಿದೆ, ಒಳಗೊಳಗೆ ಖುಷಿ ಪಡುತ್ತಿದೆಯಾ?: ಯು.ಟಿ ಖಾದರ್
ಖಾದರ್ ಹೇಳಿಕೆಗೆ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಹೇಡಿಗಳು ಎಂದು ಯಾರಿಗೆ ಹೇಳೋದು? ಎಂದು ಉಡುಪಿ ಮತ್ತು ಮಂಗಳೂರು ಜಿಲ್ಲೆಯ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ನಾನು ಯಾವುದೇ ಧರ್ಮದವರನ್ನು ಪ್ರಸ್ತಾಪ ಮಾಡಿಲ್ಲ ಎಂದು ಖಾದರ್ ಸಮರ್ಥನೆ ನೀಡಿದರು. ಇದನ್ನೂ ಓದಿ: ಮಂಗಳೂರು, ಉಡುಪಿ ಬಳಿಕ ಬೆಂಗಳೂರಿಗೂ ವ್ಯಾಪಿಸಿದ ಧರ್ಮ ಸಂಘರ್ಷ
ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡವೆ ಗದ್ದಲ ಆರಂಭವಾಯಿತು. ಖಾದರ್ ಮೇಲೆ ಬಿಜೆಪಿ ಶಾಸಕರುಗಳಾದ ಹರೀಶ್ ಪೂಂಜಾ, ರಘುಪತಿ ಭಟ್, ರೇಣುಕಾಚಾರ್ಯ, ಸತೀಶ್ ರೆಡ್ಡಿ ಮುಗಿಬಿದ್ದರು.
ಇದೊಂದು ಗಂಭೀರ ವಿಚಾರ, ಶೂನ್ಯವೇಳೆಯಲ್ಲಿ ಸರ್ಕಾರ ಉತ್ತರಿಸಬೇಕು ಎಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಬಳಿಕ ಶಾಸಕರ ಸ್ಥಳಗಳಿಗೆ ಹೋಗಿ ಕಾನೂನು ಸಚಿವ ಮಾಧುಸ್ವಾಮಿ ಸಮಾಧಾನ ಪಡಿಸಿದರು.