ಬೆಂಗಳೂರು: ಏಪ್ರಿಲ್ 19 ಮತ್ತು ಏಪ್ರಿಲ್ 26 ರಂದು ನಿಗದಿಯಾಗಿದ್ದ ಚುನಾವಣಾ ದಿನಾಂಕವನ್ನು ಬದಲಾಯಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ (Central Election Commission) ಮುಸ್ಲಿಂ ಸಂಘಟನೆಗಳು (Muslim Organisations) ಮನವಿ ಮಾಡಿವೆ.
ಮೊದಲ ಮತ್ತು ಎರಡನೇ ಹಂತದ ಚುನಾವಣೆ ದಿನವಾಗಿರುವ ಏ.19 ಮತ್ತು ಏ.26 ಶುಕ್ರವಾರ ಬರುತ್ತದೆ. ಇಸ್ಲಾಮಿಕ್ ಸಮುದಾಯವರು ಶುಕ್ರವಾರದಂದು ಪ್ರಾರ್ಥನೆಗಾಗಿ ಮಸೀದಿಗಳಿಗೆ (Mosque) ಹೋಗುತ್ತಾರೆ. ಶುಕ್ರವಾರ ನಡೆಯುವ ಮತದಾನವು ಮತದಾರರಿಗೆ ಮತ್ತು ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಅನಾನುಕೂಲವಾಗಲಿದೆ. ಹೀಗಾಗಿ ಈ ಎರಡು ದಿನಾಂಕವನ್ನು ಬದಲಾವಣೆ ಮಾಡಬೇಕೆಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IMUL) ಜೊತೆ ರಾಜ್ಯದ ರಾಜ್ಯದ ಉಲಾಮಾ ಒಕ್ಕೂಟವೂ ಮನವಿ ಮಾಡಿದೆ. ಇದನ್ನೂ ಓದಿ: ಐಸ್‌ಕ್ರೀಂ ಮಾರುತ್ತಲೇ ಹಸ್ತಮೈಥುನ ಮಾಡಿಕೊಂಡು ಸಿಕ್ಕಿಬಿದ್ದ!
Advertisement
Advertisement
ಚುನಾವಣಾ ದಿನಾಂಕ ಬದಲಾವಣೆಗೆ ಮುಸ್ಲಿಂ ಸಂಘಟನೆಗಳ ಮನವಿ ವಿಚಾರದ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿ, ನಮಗೆ ಮನವಿ ಮಾಡಿದರೆ ನಾವು ಚುನಾವಣಾ ಆಯೋಗದ ಗಮನಕ್ಕೆ ತರುತ್ತೇವೆ. ಬದಲಾವಣೆ ಮಾಡಲು ಸಾಧ್ಯತೆ ಇದೆಯಾ ಎಂಬುದನ್ನು ಚುನಾವಣಾ ಆಯೋಗ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.