ಬೆಂಗಳೂರು: ವಿಗ್ರಹ ಮಾಡೋದು ಹರಾಮ್ ಆದರೆ ಜೀವನೋಪಾಯಕ್ಕೆ ಅದು ಅನಿವಾರ್ಯವಾಗಿದೆ ಎಂದು ಮುಸ್ಲಿಂ ಮುಖಂಡ ಉಮರ್ ಷರೀಫ್ ಹೇಳಿದರು.
Advertisement
ಮುಸ್ಲಿಮರು ತಯಾರಿಸುವ ವಿಗ್ರಹವನ್ನು ಹಿಂದೂಗಳು ಪ್ರತಿಷ್ಠಾಪನೆ ಮಾಡಬಾರದು ಎಂಬ ಅಭಿಯಾನಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ವಿಗ್ರಹ ಆರಾಧನೆ ಒಪ್ಪಲ್ಲ. ವಿಗ್ರಹ ತಯಾರಿಸುವುದು ಕೂಡ ನಮ್ಮ ಧರ್ಮದ ಪ್ರಕಾರ ಹರಾಮ್. ಆದರೆ ಹೊಟ್ಟೆಪಾಡಿನ ವಿಚಾರಕ್ಕೆ ಬಂದರೆ ಸಂವಿಧಾನ ಪ್ರತಿಯೊಬ್ಬನಿಗೂ ದುಡಿದು ತಿನ್ನುವ ಹಕ್ಕು ನೀಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಹಲಾಲ್ ಆಯ್ತು ಈಗ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ
Advertisement
Advertisement
ಪ್ರತಿಯೊಂದು ವಿಚಾರಕ್ಕೂ ಧರ್ಮ ತರೋದು ಸರಿಯಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಜೀವನಕ್ಕೆ ಮತ್ತೆ ಮುಸ್ಲಿಮರು ಏನು ಮಾಡಬೇಕು? ಈ ಅಭಿಯಾನ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.