ಮಂಡ್ಯ: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್‌ಗೆ ಪ್ರತಿಯಾಗಿ ಜಟ್ಕಾ ಕಟ್ ಅಭಿಯಾನದ ಬಳಿಕ ಈಗ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹಗಳನ್ನು ಪ್ರತಿಷ್ಠಾಪಿಸದಂತೆ ಅಭಿಯಾನ ಆರಂಭವಾಗಿದೆ.
ಈ ವಿಚಾರ ಸಂಬಂಧ ಮೇಲುಕೋಟೆಯಲ್ಲಿ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಸ್ಥಾನಿಕ ಶ್ರೀನಿವಾಸನ್ ಪ್ರತಿಕ್ರಿಯಿಸಿ, ಮುಸ್ಲಿಮರು ದೇವರ ವಿಗ್ರಹಗಳನ್ನ ಕೆತ್ತನೆ ಮಾಡುವುದು ಸರಿಯಲ್ಲ. ಅದನ್ನು ಶಾಸ್ತ್ರವು ಕೂಡ ಒಪ್ಪುವುದಿಲ್ಲ. ಹೀಗಾಗಿ ಮುಂದೆ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹವನ್ನ ಯಾವ ದೇವಾಲಯದಲ್ಲಿಯೂ ಪ್ರತಿಷ್ಠಾಪನೆ ಮಾಡದಂತೆ ಅಭಿಯಾನ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾವಿನಹಣ್ಣಿನ ಮಾರ್ಕೆಟ್ ನಮ್ಮದಾಗಬೇಕು – ಹಾಸನದಲ್ಲಿ ಹೊಸ ಅಭಿಯಾನ
Advertisement
Advertisement
ಹಿಂದಿನಿಂದಲೂ ಊರಿನ ಯಜಮಾನರ ಮಾರ್ಗದರ್ಶನದಲ್ಲಿ ಮೂರ್ತಿ ಕೆತ್ತನೆಯಾಗುತ್ತಾ ಬಂದಿದೆ. ಶಾಸ್ರ್ತ ಪ್ರಕಾರವಾಗಿ ವಿಶ್ವಕರ್ಮ ಜನಾಂಗದವರೇ ಮೂರ್ತಿಯನ್ನು ಕೆತ್ತನೆ ಮಾಡಬೇಕು. ಈ ಕಾರಣದಿಂದ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡದಂತೆ ರಾಜ್ಯಾದ್ಯಂತ ಪ್ರವಾಸ ಮಾಡಿ, ದೇಗುಲದ ಅರ್ಚಕರಲ್ಲಿ ಮನವಿ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ನಗದು ಬಹುಮಾನ – ಹಲಾಲ್ ವಿರುದ್ಧ ಅಭಿಯಾನ: ಎರಡಕ್ಕೂ ನಂಟೇನು?
Advertisement
ಹಲಾಲ್ ವಿರುದ್ಧದ ಅಭಿಯಾನದ ಸಂದರ್ಭದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಕುವೆಂಪು ಕೊಟ್ಟ ಸಂದೇಶವನ್ನು ವಿಎಚ್‌ಪಿ, ಭಜರಂಗದಳದವರು ಧೂಳೀಪಟ ಮಾಡಲು ಹೋಗುತ್ತಿದ್ದಾರೆ. ಮುಸ್ಲಿಮರು ವಿಗ್ರಹಗಳನ್ನು ಕೆತ್ತುತ್ತಿದ್ದಾರೆ. ಅದನ್ನು ಏನ್ ಮಾಡ್ತೀರಿ ಎಂದು ಖಾರವಾಗಿ ಪ್ರಶ್ನಿಸಿದ್ದರು.