ಲಕ್ನೋ: ಮಥುರಾದ (Mathura) ಜಮುನಾಪರ್ ಪ್ರದೇಶದ ಮುಸ್ಲಿಂ ಕುಟುಂಬದ (Muslim Family) ಎಂಟು ಸದಸ್ಯರು ವೃಂದಾವನದ ಆಶ್ರಮದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಹಿಂದೂ ಧರ್ಮಕ್ಕೆ (Hinduism) ಮತಾಂತರ ಆಗಿದ್ದಾರೆ.
ಮುಸ್ಲಿಂ ಕುಟುಂಬ ಸದಸ್ಯರು ಕೇಸರಿ ಬಣ್ಣದ ವಸ್ತ್ರಗಳನ್ನು ಧರಿಸಿದ್ದರು. ಪುರೋಹಿತರ ಸಮ್ಮುಖದಲ್ಲಿ ಕುಟುಂಬವು ಒಂದು ಗಂಟೆಗೂ ಹೆಚ್ಚು ಕಾಲ ಹವನ-ಯಜ್ಞ ಆಚರಣೆಯನ್ನು ಮಾಡಿತು. ಇದನ್ನೂ ಓದಿ: ಚಾರ್‌ಧಾಮ್ ಯಾತ್ರೆಗೆ ಚಾಲನೆ – ಶಾಸ್ತ್ರೋಕ್ತವಾಗಿ ಕೇದಾರನಾಥ ಧಾಮದ ಬಾಗಿಲು ಓಪನ್
ಕುಟುಂಬದ ಯಜಮಾನ ಜಾಕೀರ್ ಎಂಬಾತ ಜಗದೀಶ್ ಎಂದು ಹೆಸರು ಬದಲಾಯಿಸಿಕೊಂಡರು. ‘ತಮ್ಮ ಮೂಲ ಗುರುತು ಹಿಂದೂ ಎಂಬ ನಂಬಿಕೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಮ್ಮ ಪೂರ್ವಜರು ಮೊಘಲರ ಯುಗದವರೆಗೂ ಹಿಂದೂಗಳಾಗಿದ್ದರು. ಬಳಿಕ ಒತ್ತಡದಿಂದಾಗಿ ಇಸ್ಲಾಂಗೆ ಮತಾಂತರಗೊಂಡರು. ನಾನು ಕಾಳಿ ದೇವಿಯನ್ನು ಪೂಜಿಸುತ್ತೇನೆ ಎಂದು ತಿಳಿಸಿದ್ದಾರೆ.
ಹಿಂದೂ ಧರ್ಮಕ್ಕೆ ಮರಳುವ ಆಲೋಚನೆ ಕಳೆದ ಮೂರು ವರ್ಷಗಳಿಂದ ಕುಟುಂಬದ ಮನಸ್ಸಿನಲ್ಲಿತ್ತು. ‘ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ನಮಗೆ ಯಾರೂ ಒತ್ತಡ ಹಾಕಿಲ್ಲ. ಯಾರ ಪ್ರಚೋದನೆಯೂ ಇಲ್ಲ. ಹಿಂದೂ ಧರ್ಮದ ನಂಬಿಕೆಯೊಂದಿಗೆ ಈ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೋನಿಯಾ, ರಾಹುಲ್ ಗಾಂಧಿಗೆ ದೆಹಲಿ ಕೋರ್ಟ್ ನೋಟಿಸ್
ವೃಂದಾವನದ ಶ್ರೀ ಜಿ ವಾಟಿಕಾ ಕಾಲೋನಿಯಲ್ಲಿರುವ ಭಾಗವತ್ ಧಾಮ ಆಶ್ರಮದಲ್ಲಿ ಮತಾಂತರ ನಡೆಯಿತು. ಬಲಪಂಥೀಯ ಹಿಂದೂ ಸಂಘಟನೆಯಾದ ಹಿಂದೂ ಯುವ ವಾಹಿನಿ ಇದಕ್ಕೆ ನೆರವು ನೀಡಿತು. ಜಗದೀಶ್ ಜೊತೆಗೆ, ಅವರ ಪತ್ನಿ, ಪುತ್ರರು, ಸೊಸೆಯಂದಿರು ಮತ್ತು ಮೊಮ್ಮಕ್ಕಳು ಎಲ್ಲರೂ ಸಮಾರಂಭದಲ್ಲಿ ಭಾಗವಹಿಸಿದ್ದರು.