ಲಕ್ನೋ: ಮಹಿಳೆ ಮೇಲೆ ಅತ್ಯಾಚಾರ ಹಾಗೂ ಬೆದರಿಕೆ ಹಾಕಿದ್ದಕ್ಕಾಗಿ ಮುಸ್ಲಿಂ ಧರ್ಮಗುರುವಿಗೆ 10 ವರ್ಷಗಳ ಜೈಲು (Jail) ಶಿಕ್ಷೆ ಹಾಗೂ 10,000 ರೂ. ದಂಡವನ್ನು ವಿಧಿಸಲಾಗಿದೆ. ಆದರೆ ತೀರ್ಪು ಪ್ರಕಟವಾಗುತ್ತಿದ್ದಂತೆ ಮುಸ್ಲಿಂ ಧರ್ಮಗುರು (Muslim Cleric) ಮುಗಳ್ನಗುತ್ತಾ ನ್ಯಾಯಾಲಯದಿಂದ ಹೊರಬಂದಿದ್ದಾನೆ.
ನ್ಯಾಯಮೂರ್ತಿ ನೀರಜ್ ಶ್ರೀವಾಸ್ತವ ಈ ಆದೇಶವನ್ನು ಪ್ರಕಟಿಸಿದರು. ಉತ್ತರ ಪ್ರದೇಶದ ವಾರಣಾಸಿಯಲ್ಲಿ (Varanasi) ಮಹಿಳೆಯೊಬ್ಬರ ಮೇಲೆ ಅತ್ಯಾಚಾರ, ಬೆದರಿಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಟವಾ ಮೂಲದ ಮುಸ್ಲಿಂ ಧರ್ಮಗುರು ಮೌಲಾನಾಗೆ ಶಿಕ್ಷೆ ವಿಧಿಸಲಾಗಿದೆ.
Advertisement
Advertisement
2016ರಲ್ಲಿ ವಾರಣಾಸಿಯ ಮಹಿಳೆಯೊಬ್ಬರು ವಿವಾಹದ ನೆಪದಲ್ಲಿ ಧರ್ಮಗುರು ತನ್ನ ಮೇಲೆ ಅತ್ಯಾಚಾರವೆಸಗಿದ್ದು, ನಂತರ ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎಂದು ಆರೋಪಿಸಿದ್ದರು. ಮಹಿಳೆಯ ದೂರಿನ ಪ್ರಕಾರ, 2013ರಲ್ಲಿ ಮೌಲಾನಾ ಮಹಿಳೆಯನ್ನು ಭೇಟಿಯಾಗಿದ್ದ. ಆತ ವಾರಣಾಸಿಗೆ ಬಂದಾಗಲೆಲ್ಲಾ ಮದುವೆಯ ನೆಪದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಈ ಎಲ್ಲಾ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದ. ಆನಂತರದಲ್ಲಿ ಆತ ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದಾನೆ. ಇದನ್ನೂ ಓದಿ: ಬಿಎಸ್‍ವೈಗೆ ಸುಪ್ರೀಂಕೋರ್ಟ್‍ನಿಂದ ತಾತ್ಕಾಲಿಕ ರಿಲೀಫ್ – ಬಿ.ವೈ. ವಿಜಯೇಂದ್ರಗೆ ಸಂಕಷ್ಟ
Advertisement
Advertisement
ಈ ಹಿನ್ನೆಲೆಯಲ್ಲಿ ಮಹಿಳೆಯು ಮೌಲಾನಾ ಜಾರ್ಜಿಸ್ ವಿರುದ್ಧ ಅತ್ಯಾಚಾರ, ಬ್ಲ್ಯಾಕ್ ಮೇಲ್ ಮಾಡುತ್ತಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಾರಣಾಸಿಯ ಜೈತ್‍ಪುರ ಪೊಲೀಸ್ ಠಾಣೆಯಲ್ಲಿ 2016ರ ಜನವರಿ 17ರಂದು ಮೌಲನಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ನ್ಯಾಯಾಲಯ ತೀರ್ಪನ್ನು ನೀಡಿದೆ. ಇದನ್ನೂ ಓದಿ: ಕಾಡಿನಲ್ಲಿ ಗ್ಯಾಂಗ್‌ರೇಪ್ – ಬೆತ್ತಲಾಗಿ ಓಡಿಬಂದ ಹುಡುಗಿಗೆ ಹುಚ್ಚಿಯೆಂದು ಕಲ್ಲೆಸೆದ ಜನ