ಬೆಂಗಳೂರು: ಹಿಂದೂ ಹುಡುಗಿ, ಮುಸ್ಲಿಮ್ ಧರ್ಮದ ಯುವಕ ಮದುವೆಯಾಗಿದ್ದು ಇದಕ್ಕೆ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ.
ಇಟ್ಟುಮಡುವಿನ 19 ವರ್ಷದ ಲತಾಷ ಮತ್ತು ಎಂ ಎಸ್ ಪಾಳ್ಯದ ಮುಸ್ಲಿಂ ಶೇಕ್ ಷಾ 5 ದಿನದ ಹಿಂದೆ ಹಿಂದೂ ಸಂಪ್ರದಾಯದಂತೆ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದರು.
Advertisement
Advertisement
ಮಗಳು ಮದುವೆಯಾದ ವಿಚಾರ ತಿಳಿದು ಪೋಷಕರು ಆಕ್ರೋಶಗೊಂಡಿದ್ದು, ನನ್ನ ಮಗಳ ತಲೆಕೆಡಿಸಿ ಯುವಕ ಮದುವೆಯಾಗಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ನನ್ನ ಮಗಳ ಸಾವಿಗೆ ತೆಲುಗು ನಟ ಕಾರಣ- ಸೌಜನ್ಯ ತಂದೆ ದೂರು
Advertisement
ವಿದ್ಯಾರಣ್ಯಪುರ ಪೊಲೀಸ್ ಸ್ಟೇಷನ್ ಮುಂದೆ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ 50ಕ್ಕೂ ಹೆಚ್ಚು ಜನ ಯುವತಿಯ ಸಂಬಂಧಿಕರು ನಮ್ಮ ಮನೆಗೆ, ನಮ್ಮ ಹುಡುಗಿಯನ್ನು ಕರೆದುಕೊಂಡು ಹೋಗುತ್ತೇವೆ ಎಂದು ಬಿಗಿಪಟ್ಟು ಹಿಡಿದಿದ್ದಾರೆ.
Advertisement
ನಾವು ಯಾವುದೇ ಕಾರಣಕ್ಕೂ ಬರುವುದಿಲ್ಲ. ಪ್ರೀತಿಸಿ ಮದುವೆಯಾದ ಹುಡುಗ ಕಡೆಯೇ ಇರುತ್ತೇನೆ ಎಂದು ಹೇಳಿ ಯುವತಿ ಪೊಲೀಸ್ ಠಾಣೆಯಲ್ಲೇ ಕುಳಿತಿದ್ದಾಳೆ. ಯುವತಿಯ ಪೋಷಕರು ಮೂಲತಃ ರಾಜಸ್ಥಾನದವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇದನ್ನೂ ಓದಿ: ವಿಮಾನದ ಪ್ರಯಾಣಿಕರ ಸೀಟ್ ಕೆಳಗೆ 61 ಲಕ್ಷದ ಚಿನ್ನದ ಪೇಸ್ಟ್, ಕಡ್ಡಿಗಳು ಪತ್ತೆ