– ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ
ಬೆಂಗಳೂರು: ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಂಡಿಗೋ ವಿಮಾನದ ಸೀಟ್ ಕೆಳಗೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಪತ್ತೆಯಾಗಿದ್ದು, ಆರೋಪಿಗಳ ಪತ್ತೆಗಾಗಿ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
Advertisement
ಇಂಡಿಗೋ 6ಇ 096 ವಿಮಾನ ದುಬೈ ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಬೆಂಗಳೂರು ಕಸ್ಟಮ್ಸ್ ವಿಭಾಗದ ಏರ್ ಇಂಟೆಲಿಜೆನ್ಸ್ ಯೂನಿಟ್ (AIU) ಅಧಿಕಾರಿಗಳಿಗೆ ವಿಮಾನದಲ್ಲಿ ಚಿನ್ನದ ಸ್ಮಗ್ಲಿಂಗ್ ನಡೆದಿರುವ ಬಗ್ಗೆ ಅನುಮಾನ ಬಂದಿದೆ. ಈ ವೇಳೆ ವಿಮಾನದಲ್ಲಿ ಪರಿಶೀಲನೆ ನಡೆಸಿದ್ದು, 29 ಚಿನ್ನದ ಕಡ್ಡಿಗಳು ಮತ್ತು ಪೇಸ್ಟ್ ರೂಪದ ಚಿನ್ನ ಪತ್ತೆಯಾಗಿದೆ. ಪಾಕೆಟ್ ನಲ್ಲಿ 599 ಗ್ರಾಂ. ಚಿನ್ನದ ಕಡ್ಡಿಗಳು ಮತ್ತು 701 ಗ್ರಾಂ. ಚಿನ್ನದ ಪೇಸ್ಟ್ ಇದ್ದು, ಒಟ್ಟು 61 ಲಕ್ಷ ರೂ. ಮೌಲ್ಯದ ಚಿನ್ನವನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: 39 ಕೋಟಿ ತೆರಿಗೆ ಬಾಕಿ- ಬಿಬಿಎಂಪಿಯಿಂದ ಮಂತ್ರಿ ಮಾಲ್‍ಗೆ ಬೀಗ
Advertisement
ವಿಮಾನದಿಂದ ಪ್ರಯಾಣಿಕರೆಲ್ಲ ನಿರ್ಗಮಿಸಿದ ನಂತರ ಅಧಿಕಾರಿಗಳು ವಿಮಾನವನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಎಕಾನಾಮಿ ಕ್ಲಾಸ್ ನ ಸೀಟ್ ಕೆಳಗೆ ಪೊಟ್ಟಣವೊಂದು ಪತ್ತೆಯಾಗಿದ್ದು, ಪೊಟ್ಟಣವನ್ನ ಬಿಚ್ಚಿ ನೋಡಿದಾಗ 29 ಚಿನ್ನದ ಕಡ್ಡಿಗಳು ಮತ್ತು ಪೇಸ್ಟ್ ರೂಪದ ಚಿನ್ನ ಪತ್ತೆಯಾಗಿದೆ.
Advertisement
Advertisement
ಪಾಕೆಟ್ ನಲ್ಲಿ 599 ಗ್ರಾಂ. ಚಿನ್ನದ ಕಡ್ಡಿಗಳು ಮತ್ತು 701 ಗ್ರಾಂ. ಚಿನ್ನದ ಪೇಸ್ಟ್ ಇದ್ದು ಒಟ್ಟು 61 ಲಕ್ಷ ಮೌಲ್ಯದ ಚಿನ್ನವನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆಸಿರುವ ಅಧಿಕಾರಿಗಳು, ಪ್ರಯಾಣಿಕರ ಲಿಸ್ಟ್ ಪಡೆದುಕೊಂಡಿದ್ದಾರೆ. ಸ್ಮಗ್ಲರ್ ಗ್ಯಾಂಗ್ ತೆಗೆದುಕೊಳ್ಳಲು ಚಿನ್ನವನ್ನು ಸೀಟ್ ಕೆಳಗೆ ಬಿಟ್ಟು ಹೋಗಿರುವ ಅನುಮಾನದ ಮೇಲೆ ತನಿಖೆ ಮುಂದುವರಿದಿದೆ.