ಲಕ್ನೋ: ಭಾರತ ಪ್ರವಾಸಕ್ಕೆ ಬಂದಿದ್ದ ಅಮೆರಿಕ ಮುಸ್ಲಿಂ ದಂಪತಿ (Muslim American) ಉತ್ತರಪ್ರದೇಶದ (Uttar Pradesh) ಜಾನ್‍ಪುರದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು. (Marriage)
ಜೌನ್‍ಪುರದ ತ್ರಿಲೋಚನ್ ಮಹಾದೇವ ದೇವಸ್ಥಾನದಲ್ಲಿ (Temple) ವಿವಾಹ ನೆರವೇರಿತು. ಅಮೆರಿಕ ಮೂಲದ ಮುಸ್ಲಿಂ ದಂಪತಿಯಾದ (couple) ಕಿಯಾಮಾ ದಿನ್ ಖಲೀಫಾ ಹಾಗೂ ಕೇಶಾ ಕಲೀಫಾ ಅವರು ಭಾರತ ಪ್ರವಾಸದಲ್ಲಿದ್ದಾಗ ದೇಶದ ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ಮಾರುಹೋಗಿದ್ದರು. ಈ ಹಿನ್ನೆಲೆಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮರು ಮದುವೆಯಾಗಲು ನಿರ್ಧರಿಸಿದ್ದಾರೆ.
Advertisement
Advertisement
ವಾರಣಾಸಿಯ ದೇವಾಲಯಗಳು ಹಾಗೂ ಇತರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದಾಗ ದಂಪತಿ ಹಿಂದೂ ಸಂಸ್ಕೃತಿಯಿಂದ ಆಕರ್ಷಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಮಹಾದೇವ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಲ್ಲಿ ಮರುಮದುವೆಯಾದರು. ಇದನ್ನೂ ಓದಿ: ಟೆಕ್‍ಆಫ್ ಆಗಿದ್ದ ವಿಮಾನದಲ್ಲಿ ಕಿಟಕಿ ಒದ್ದು ದಾಂಧಲೆ- ಪಾಕ್ ಪ್ರಯಾಣಿಕ ಅರೆಸ್ಟ್
Advertisement
ದಂಪತಿಗೆ 18 ವರ್ಷಗಳ ಹಿಂದೆ ಮುಸ್ಲಿಂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದು, 9 ಮಕ್ಕಳಿದ್ದಾರೆ. ವರ ಕಿಯಾಮಾ ದಿನ್ ಖಲೀಫಾ ಅವರ ಅಜ್ಜ ಭಾರತೀಯ ಮೂಲದ ಹಿಂದೂ ಆಗಿದ್ದರು. ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ-ಪಿಯು ಮಂಡಳಿ ವಿಲೀನಕ್ಕೆ ನಿರ್ಧಾರ – ಸಂಪುಟ ಸಭೆಯಲ್ಲಿ ಅನುಮೋದನೆ