ವಾಷಿಂಗ್ಟನ್: ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾದ ಮುಖ್ಯಸ್ಥ, ವಿಶ್ವದ ನಂಬರ್ 1 ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಟ್ವಿಟ್ಟರ್ ಕಂಪನಿಯನ್ನು ಖರೀದಿಸಲು ವಾಷಿಂಗ್ಟನ್ ಪೋಸ್ಟ್ ಅಂಕಣ ಕಾರಣವೇ ಎಂಬ ಪ್ರಶ್ನೆ ಎದ್ದಿದೆ.
ಹೌದು. ಎಲೋನ್ ಮಸ್ಕ್ ಅವರ ‘ಮುಕ್ತ ಸ್ವಾತಂತ್ರ್ಯ’ ದೃಷ್ಟಿ ಟ್ವಿಟ್ಟರ್‌ಗೆ ಕೆಟ್ಟದ್ದು ಎಂಬ ತಲೆ ಬರಹದಲ್ಲಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ವಾರದ ಹಿಂದೆ ಒಂದು ಅಂಕಣ ಬರೆಯಲಾಗಿತ್ತು.
Advertisement
The Washington Post thinks Elon Musk taking a stake in Twitter to fight for Free Speech will be bad because he’s the richest man in the world and we need to “prevent rich people from controlling our channels of communication”.
Zero self awareness. pic.twitter.com/QvjBIsz3rU
— Benny (@bennyjohnson) April 9, 2022
Advertisement
ಈ ಅಂಕಣದಲ್ಲಿ ಮಸ್ಕ್ ಅವರು ಷೇರು ಖರೀದಿಸಿದ ವಿಚಾರವನ್ನು ಪ್ರಸ್ತಾಪಿಸಿ ಟ್ವಿಟ್ಟರ್ ಬೋರ್ಡ್‌ಗೆ ಅವರನ್ನು ನೇಮಕ ಮಾಡುವ ಬಗ್ಗೆ ಬರೆಯಲಾಗಿತ್ತು. ಜೊತೆಗೆ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂಗಳನ್ನು ಶ್ರೀಮಂತ ವ್ಯಕ್ತಿಗಳು ನಿಯಂತ್ರಿಸುವುದಕ್ಕೆ ನಿರ್ಬಂಧ ಹೇರಬೇಕು ಎಂದು ಪ್ರಕಟವಾಗಿತ್ತು.
Advertisement
ಬೇರೆ ಪತ್ರಿಕೆಯಲ್ಲಿ ಈ ಅಂಕಣ ಪ್ರಕಟವಾಗಿದ್ದರೆ ಅದು ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಆದರೆ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಈಗ ಈ ವಿಚಾರ ಭಾರೀ ಚರ್ಚೆ ಆಗುತ್ತಿದೆ. ಇದನ್ನೂ ಓದಿ: ಒಂದೇ ಬಾರಿಗೆ 32 ಜನರಿಗೆ ವಾಯ್ಸ್ ಕಾಲ್ – ಹೀಗಿವೆ ವಾಟ್ಸಪ್‌ನ 4 ಹೊಸ ಫೀಚರ್ಸ್
Advertisement
The @washingtonpost, owned by a homeless guy, complain about @twitter bid by #Musk
That would be the same as having someone like #Berlusconi complaining because a social media platform has been eyed by #DeBenedetti
Fascism comes in many form, recognizing it it’s the hardest part pic.twitter.com/GUv2yVXHix
— PoMaTo (@PoMaTo01389778) April 15, 2022
ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯನ್ನು ನ್ಯಾಶ್ ಹೋಲ್ಡಿಂಗ್ಸ್ ಕಂಪನಿ 2013 ರಲ್ಲಿ 250 ದಶಲಕ್ಷ ಡಾಲರ್ ನೀಡಿ ಖರೀದಿಸಿದೆ. ನ್ಯಾಶ್ ಹೋಲ್ಡಿಂಗ್ಸ್ ಕಂಪನಿಯ ಮಾಲೀಕ ಬೇರೆ ಯಾರು ಅಲ್ಲ. ಸದ್ಯ ವಿಶ್ವದ ನಂಬರ್ 2 ಶ್ರೀಮಂತ, ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ನ್ಯಾಶ್ ಹೋಲ್ಡಿಂಗ್ಸ್ ಕಂಪನಿಯ ಮುಖ್ಯಸ್ಥರಾಗಿದ್ದಾರೆ.
ಜೆಫ್ ಬೆಜೋಸ್ ಮಾಲೀಕತ್ವದ ಕಂಪನಿಯ ಪತ್ರಿಕೆಯಲ್ಲಿ ತನ್ನ ವಿರುದ್ಧ ಟ್ವಿಟ್ಟರ್ ಕುರಿತಾಗಿ ಸರಣಿ ಬರಹಗಳು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಮಸ್ಕ್ ಈಗ ಟ್ವಿಟ್ಟರ್ ಕಂಪನಿಯನ್ನೇ ಖರೀದಿಸಲು ಮುಂದಾಗಿದ್ದಾರೆ ಎಂಬ ವಿಚಾರ ಈಗ ಚರ್ಚೆ ಆಗುತ್ತಿದೆ.
Tell that to Jeff Bezos, you know Amazon, The Washington Post buyer/owner. But I guess Musk owning a Free Speech Platform might cause you fear! pic.twitter.com/mZHnsBWXyK
— @Mike at the Beach (@mike123qwe) April 15, 2022
ಕ್ಯಾಪಿಟಲ್ ಹಿಲ್ ಘಟನೆಯ ಬಳಿಕ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಗೆ ಟ್ವಿಟ್ಟರ್ ಸಂಪೂರ್ಣ ನಿಷೇಧ ಹೇರಿತ್ತು. ಈ ವಿಚಾರ ಚರ್ಚೆ ಆಗುತ್ತಿದ್ದಾಗ ಮಸ್ಕ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರೂ ಹತ್ತಿಕ್ಕಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಯಶಸ್ವಿ ಉದ್ಯಮಿಯಾಗಿರುವ ಮಸ್ಕ್ ಟ್ವಿಟ್ಟರ್ ಅನ್ನು ದೊಡ್ಡ ಕಂಪನಿಯನ್ನಾಗಿ ಮಾಡಲು ಮುಂದಾಗಿದ್ದಾರೆ. ಆದರೆ ಅವರ ಮಾತಿಗೆ ಟ್ವಿಟ್ಟರ್ ಬೋರ್ಡ್‌ನಿಂದ ಸರಿಯಾಗಿ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಈಗ ಟ್ವಿಟ್ಟರ್ ಕಂಪನಿಯನ್ನೇ ಖರೀದಿ ಮಾಡಲು ಮುಂದಾಗಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಎಲೋನ್ ಮಸ್ಕ್ ಟ್ವಿಟ್ಟರ್ ಮಂಡಳಿಯ ಭಾಗವಲ್ಲ: ಪರಾಗ್ ಅಗರ್ವಾಲ್
Will endeavor to keep as many shareholders in privatized Twitter as allowed by law
— Elon Musk (@elonmusk) April 14, 2022
ಮಸ್ಕ್ ಹೇಳಿದ್ದೇನು?
ಮುಕ್ತ ಅಭಿವ್ಯಕ್ತಿಗೆ ಜಗತ್ತಿನ ಎಲ್ಲೆಡೆ ವೇದಿಕೆಯಾಗಬಲ್ಲ ಶಕ್ತಿ ಟ್ವಿಟ್ಟರ್‌ಗೆ ಇದೆ ಎಂಬ ನಂಬಿಕೆಯಿಂದ ನಾನು ಟ್ವಿಟ್ಟರ್‌ನಲ್ಲಿ ಹೂಡಿಕೆ ಮಾಡಿದ್ದೇನೆ. ಆದರೆ ಈಗ ಇರುವ ಸ್ವರೂಪದಲ್ಲಿದ್ದಾರೆ ಈ ಉದ್ದೇಶ ಈಡೇರುವುದಿಲ್ಲ ಮತ್ತು ಬೆಳೆಯುವುದಿಲ್ಲ. ಹೀಗಾಗಿ ಟ್ವಿಟ್ಟರ್ ಅನ್ನು ಖಾಸಗಿ ಕಂಪನಿಯನ್ನಾಗಿ ಪರಿವರ್ತಿಸಬೇಕು ಎಂದು ಟ್ವೀಟ್ ಮಾಡಿದ್ದರು.
ಶೇ.9 ರಷ್ಟು ಷೇರು ಖರೀದಿಸಿದ ಬಳಿಕ ಮಸ್ಕ್ ಈಗ ಟ್ವಿಟ್ಟರ್‌ನ ದೊಡ್ಡ ಹೂಡಿಕೆದಾರರಾಗಿದ್ದಾರೆ. ಮಸ್ಕ್ ಮೈಕ್ರೋಬ್ಲಾಗಿಂಗ್ ಆಡಳಿತ ಮಂಡಳಿ ಸ್ಥಾನವನ್ನು ತಿರಸ್ಕರಿಸಿದ ಬಳಿಕ ಗುರುವಾರ 41 ಬಿಲಿಯನ್ ಡಾಲರ್(ಸುಮಾರು 3 ಲಕ್ಷ ಕೋಟಿ ರೂ.)ಗೆ ಟ್ವಿಟ್ಟರ್‌ನ ಶೇ.100 ಪಾಲನ್ನು ಖರೀದಿಸುವಂತೆ ಕಂಪನಿಗೆ ಆಫರ್ ನೀಡಿದ್ದಾರೆ. ತನ್ನ ಖರೀದಿ ನಿರ್ಧಾರವನ್ನು ಅಮೆರಿಕದ ಸೆಕ್ಯೂರಿಟಿ ಆಂಡ್ ಎಕ್ಸ್ಚೇಂಜ್ ಕಮಿಷನ್‌ಗೆ ಮಸ್ಕ್ ತಿಳಿಸಿದ್ದಾರೆ.
ಟ್ವಿಟ್ಟರ್‌ನ ಪ್ರತಿ ಷೇರಿಗೆ 54.20 ಡಾಲರ್ (₹4,124.81) ಕೊಡುವುದಾಗಿ ಎಲಾನ್ ಮಸ್ಕ್ ಷೇರುಪೇಟೆ ನಿಯಂತ್ರಣ ಮಂಡಳಿಗೆ ಸಲ್ಲಿಸಿರುವ ದಾಖಲೆ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.