ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಅವರು ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ (Twitter) ಅನ್ನು ಖರೀದಿಸಿದರೆ ಕಂಪನಿಯ ಶೇ.75 ರಷ್ಟು ಉದ್ಯೋಗಿಗಳನ್ನೇ ವಜಾಗೊಳಿಸಲು (Lay Off) ಪ್ಲಾನ್ ಮಾಡಿದ್ದಾರೆ ಎಂದು ದಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಟ್ವಿಟ್ಟರ್ ಈ ವರದಿಯನ್ನು ತಳ್ಳಿಹಾಕಿದೆ. ವರದಿಗೆ ಪ್ರತಿಕ್ರಿಯಿಸಿರುವ ಕಂಪನಿ, ತನ್ನ ಉದ್ಯೋಗಿಳನ್ನು ವಜಾಗೊಳಿಸುವ ಯಾವುದೇ ಯೋಜನೆಗಳನ್ನು ಮಾಡಿಲ್ಲ ಎಂದು ತಿಳಿಸಿದೆ.
ಕಂಪನಿ ಜುಲೈನಲ್ಲಿ ಟೆಕ್ ಉದ್ಯಮದಲ್ಲಿ ಆರ್ಥಿಕ ಕುಸಿತ ಉಂಟಾಗಿದ್ದು, ನೇಮಕಾತಿಯನ್ನು ತಡೆಹಿಡಿಯುವುದಾಗಿ ತಿಳಿಸಿತ್ತು. ಆದರೆ ಶೇ.75 ರಷ್ಟು ಉದ್ಯೋಗಿಗಳನ್ನು ತೆಗೆದುಹಾಕುವುದರಿಂದ ಕಂಪನಿ ಮುಂದೆ ಅಪಾಯವನ್ನು ಎದುರಿಸುವ ಸಾಧ್ಯತೆ ಇದೆ. ಈ ಹಿಂದೆ ಎಲೋನ್ ಮಸ್ಕ್, ಟ್ವಿಟ್ಟರ್ ಅನ್ನು ಸ್ವಾಧೀನ ಪಡಿಸಿಕೊಂಡ ಬಳಿಕ ಸ್ಪ್ಯಾಮ್ ಬಾಟ್ ಖಾತೆಗಳನ್ನು ತೆಗೆದುಹಾಕಲು ಯೋಜಿಸಿರುವುದಾಗಿ ಹೇಳಿದ್ದರು. ಇದನ್ನೂ ಓದಿ: ವಿಯೆಟ್ನಾಂದಲ್ಲೂ ನಡೆಯುತ್ತಿದೆ ʻಕಾಂತಾರʼ ವಿಶೇಷ ಪ್ರದರ್ಶನ
ಟ್ವಿಟ್ಟರ್ ಖರೀದಿಸಲು ಮಸ್ಕ್ ಈ ವರ್ಷ ಏಪ್ರಿಲ್‌ನಲ್ಲಿಯೇ ಒಪ್ಪಿಗೆ ನೀಡಿದ್ದರು. ಆದರೆ ಬಳಿಕ ನಕಲಿ ಹಾಗೂ ಸ್ಪ್ಯಾಮ್ ಬಾಟ್ ಖಾತೆಗಳ ಸಂಖ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಮಸ್ಕ್ ಒಪ್ಪಂದವನ್ನು ನಿರಾಕರಿಸಿದರು. ಆದರೂ ಕಂಪನಿ ಮಸ್ಕ್‌ನೊಂದಿಗಿನ ಒಪ್ಪಂದವನ್ನು ಮರಳಿ ಜಾರಿಗೆ ತರುವ ಸಲುವಾಗಿ ಅವರ ವಿರುದ್ಧ ಮೊಕದ್ದಮೆ ಹೂಡಿತ್ತು.
ಮಸ್ಕ್ ಇದೀಗ ಟ್ವಿಟ್ಟರ್ ಅನ್ನು ಷೇರಿಗೆ 54.20 ಡಾಲರ್‌ಗೆ ಖರೀದಿಸಲು ಒಪ್ಪಿಕೊಂಡಿದ್ದಾರೆ. ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ವಿವರಗಳನ್ನು ನೀಡಲು ಎರಡೂ ಕಡೆಯವರಿಗೆ ನ್ಯಾಯಾಲಯ ಅಕ್ಟೋಬರ್ 28ರ ವರೆಗೆ ಕಾಲಾವಕಾಶ ನೀಡಿದೆ. ವಿವರಗಳನ್ನು ನೀಡಲು ಎರಡೂ ಕಡೆಯವರು ವಿಫಲವಾದರೆ ನವೆಂಬರ್‌ನಲ್ಲಿ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಫ್ ಹೆಲ್ಮೆಟ್ ಧರಿಸಿದ ಪೊಲೀಸ್‍ಗೇ ಬಿತ್ತು ದಂಡ!