ಕನ್ನಡದ `ಕಾಂತಾರ’ (Kantara Film) ಸಿನಿಮಾ ದಶದಿಕ್ಕುಗಳಲ್ಲೂ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ದೈವದ ಅಪ್ಪಟ ಕಥೆಗೆ ಕನ್ನಡಿಗರು ಮಾತ್ರವಲ್ಲದೇ ಪರಭಾಷೆಯ ಪ್ರೇಕ್ಷಕರು ಮಾರುಹೋಗಿದ್ದಾರೆ. ಹೊರದೇಶದಲ್ಲೂ ಕನ್ನಡಿಗರು ನೆಲೆಸಿದ್ದಾರೆ ಅವರಿಗಾಗಿ ವಿಶೇಷ ʻಕಾಂತಾರʼ ಚಿತ್ರ ಪ್ರದರ್ಶನ ಆಯೋಜಿಸಲು ತಯಾರಿ ನಡೆಸುತ್ತಿದ್ದಾರೆ.
Advertisement
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ `ಕಾಂತಾರ’ ಸಿನಿಮಾ(Kantara Film) ಇದೀಗ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದೇಶದ ಮೂಲೆ ಮೂಲೆಯಲ್ಲೂ ಮೋಡಿ ಮಾಡುತ್ತಿರುವ ಈ ಚಿತ್ರದ ವಿಶೇಷ ಪ್ರದರ್ಶನವನ್ನ ನ.1ರಂದು ಆಯೋಜಿಸಲು ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಹೊರದೇಶದಲ್ಲೂ ಕನ್ನಡಿಗರು ಇರುವ ಕಾರಣ. ಕನ್ನಡಿಗರ ವಿಶೇಷ ದಿನ ನ.1ರಂದು ವಿಯೆಟ್ನಾಂನ ಹೋ ಚಿ ಮಿನ್ಹ್ ಸಿಟಿಯ ಪ್ರೇಕ್ಷಕರಿಗೆ ಕಾಂತಾರ ಸಿನಿಮಾ ಪ್ರದರ್ಶನ ಆಯೋಜಿಸಲಾಗಿದೆ. ಇದನ್ನೂ ಓದಿ: ರಮ್ಯಾ ನಿರ್ಮಾಣದ ಸಿನಿಮಾದಿಂದ ರಮ್ಯಾನೇ ಔಟ್ : ಕೈ ಜಾರಿತಾ ಸ್ವಾತಿ ಮುತ್ತು?
Advertisement
Advertisement
ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಸಲುವಾಗಿ `ಕಾಂತಾರ ಚಿತ್ರ ಪ್ರದರ್ಶನ ಮಾಡಲಾಗುತ್ತಿದೆ. ಹೊರದೇಶದಲ್ಲೂ ಸಿನಿಮಾ ಮೋಡಿ ಮಾಡುತ್ತಿದೆ.