ಸಂಗೀತ ದಂತಕಥೆ ಎಂ.ಎಸ್.ಸುಬ್ಬಲಕ್ಷ್ಮೀ ಬಯೋಪಿಕ್ : ರಾಕ್‌ಲೈನ್ ವೆಂಕಟೇಶ್ ನಿರ್ಮಾಪಕ

Public TV
1 Min Read
subbalakshmi 2

ಈ ಹಿಂದೆ ಬಾಲಿವುಡ್ ನ ಖ್ಯಾತ ನಟಿ ವಿದ್ಯಾ ಬಾಲನ್ ಅವರು ಸಂಗೀತ ದಂತಕಥೆ, ಭಾರತ ರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಅವರ ಜೀವನವನ್ನು ಆಧರಿಸಿದ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಈ ವಿಷಯವನ್ನು ಸ್ವತಃ ವಿದ್ಯಾ ಬಾಲನ್ ಅವರು ಖಚಿತ ಪಡಿಸಿದ್ದರು. ಈಗ ಕನ್ನಡ ಸಿನಿಮಾ ರಂಗದಿಂದ ಮತ್ತೊಂದು ಹೊಸ ಸುದ್ದಿ ಬಂದಿದೆ. ಕನ್ನಡದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಎಂ.ಎಸ್.ಸುಬ್ಬಲಕ್ಷ್ಮೀ ಬಯೋಪಿಕ್ ಅನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

subbalakshmi 1

ವಿದ್ಯಾ ಬಾಲನ್ ನಟಿಸಬೇಕಿದ್ದ ಸಿನಿಮಾ ಮತ್ತು ರಾಕ್ ಲೈನ್ ವೆಂಕಟೇಶ್ ಮಾಡುತ್ತಿರುವ ಈ ಸಿನಿಮಾ ಒಂದೇನಾ? ಅನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಆದರೆ, ಎಲ್ಲವೂ ಒಂದು ಹಂತದಲ್ಲಿ ಬರುವವರೆಗೂ ಈ ಸಿನಿಮಾದ ಬಗ್ಗೆ ಏನೂ ಹೇಳಲಾರೆ ಎಂದಿದ್ದಾರೆ ರಾಕ್ ಲೈನ್ ವೆಂಕಟೇಶ್. ಆದರೆ, ಎಂ.ಎಸ್.ಸುಬ್ಬಲಕ್ಷ್ಮೀ ಅವರ ಕುರಿತಾಗಿ ಸಿನಿಮಾ ಮಾಡುತ್ತಿರುವ ಕುರಿತು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

subbalakshmi 4

ಸದ್ಯ ಸ್ಕ್ರಿಪ್ಟ್ ಹಂತದಲ್ಲೇ ಸಿನಿಮಾ ಇರುವುದರಿಂದ ಯಾವುದೇ ಮಾಹಿತಿ ಕೊಡಲಾರೆ ಅಂದಿದ್ದಾರಂತೆ ರಾಕ್ ಲೈನ್ ವೆಂಕಟೇಶ್. ‘ಕಥೆ ಓಕೆ ಆಗಿದೆ. ಚಿತ್ರಕಥೆ ರೆಡಿಯಾಗುತ್ತಿದೆ. ಸೂಕ್ತ ಕಲಾವಿದರ ಆಯ್ಕೆಯಾಗಬೇಕು. ಇದೆಲ್ಲವೂ ಆದ ನಂತರ ಸಿನಿಮಾದ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

subbalakshmi 3

ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಅದಕ್ಕೆ ತಕ್ಕಂತೇ ಕಲಾವಿದರು ಮತ್ತು ತಂತ್ರಜ್ಞರು ಈ ಸಿನಿಮಾಗಾಗಿ ಕೆಲಸ ಮಾಡಲಿದ್ದಾರೆ. ಹಲವು ಭಾಷೆಗಳಲ್ಲೂ ಈ ಸಿನಿಮಾ ಮೂಡಿ ಬರಲಿದೆ ಎನ್ನಲಾಗುತ್ತಿದೆ. ಸದ್ಯಕ್ಕೆ ಸಿನಿಮಾ ಸ್ಕ್ರಿಪ್ಟ್ ಹಂತದಲ್ಲಿ ಇರುವುದರಿಂದ ವಿದ್ಯಾ ಬಾಲನ್ ಮಾಡಬೇಕಿದ್ದ ಸಿನಿಮಾ ಇದೆನಾ? ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ.

Share This Article
Leave a Comment

Leave a Reply

Your email address will not be published. Required fields are marked *