ಬೆಂಗಳೂರು: ನಾನು ಮಾಗಡಿ ರೋಡ್‍ನಲ್ಲಿ ದೊಡ್ಡ ದೊಡ್ಡ ಪೋಲಿ ಆಟವನ್ನೇಲ್ಲ ಆಡಿ ಬಂದವನು ಎಂದು ಸಂಗೀತ ಮಾಂತ್ರಿಕ ಹಂಸಲೇಖ ಹೇಳಿಕೊಂಡಿದ್ದಾರೆ.
Advertisement
ಗಾಂಧಿ ಭವನದಲ್ಲಿ ನಡೆದ ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮ ಕಥನ ‘ಯರೆಬೇವು’ ಪುಸ್ತಕ ಬಿಡುಗಡೆ ಹಾಗೂ ಡಾ.ಎಂ ಎಂ ಕಲಬುರ್ಗಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಮಾಗಡಿ ರೋಡ್‍ನಲ್ಲಿ ದೊಡ್ಡ ದೊಡ್ಡ ಪೋಲಿ ಆಟವನ್ನು ಆಡಿ ಬಂದವನು ದೊಡ್ಡ ತಂಡವನ್ನು ಕಟ್ಟಿಕೊಂಡಿದ್ದೆ. ಅದೊಂದು ಚರಿತ್ರೆಯೇ ದೊಡ್ಡ ಚರಿತ್ರೆ ಅಲ್ಲಿಂದ ಬಂದವನು. ಆದರೆ ನಿನಗೆ ಆ ಅನುಭವವಿಲ್ಲ ಎಂದು ನಾಗರಾಜ ಮೂರ್ತಿಯವರಿಗೆ ಹೇಳಿದರು. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಮುಖ್ಯಮಂತ್ರಿ ಆಗಲಿ: ಹಂಸಲೇಖ
Advertisement
Advertisement
ಈಗ ನನಗೆ 70 ತಿನ್ನೋದು ಒಪ್ಪತ್ತು ಉಳಿದ ಇನ್ನೂ 2 ಹೊತ್ತು ಏನು ಹಸಿವು ಆಗುತ್ತದೆ. ಅದೇನು ಹಸಿವಾ? ಅದು ಬರೀ ಬಸವಾ, ಬಸವನ ಹಸಿವು ಇನ್ನೂ ಎರಡು ಹೊತ್ತಿಗೂ ಪ್ರೋಟಿನ್ಸ್ ಕೊಡುತ್ತೆ. ಒಂದು ಹೊತ್ತು ತಿನ್ನುತ್ತೇವೆ. 70 ಆದರೆ ಏನಂತೆ ಇನ್ನೊಂದಷ್ಟು ವರ್ಷ ಇರತ್ತೇವೆ. ಜೀವನದಲ್ಲಿ ಅಂದುಕೊಂಡದನ್ನ ಸಾಧಿಸಿ ಬಿಟ್ಟು ಹೋಗೋದಿದೆ. ಅದಷ್ಟೇ ನಮ್ಮ ಗುರಿ ಅದನ್ನು ಮಾಡೋದಕ್ಕೆ ನಾವು ಸಿದ್ದವಾಗಿದ್ದೇವೆ ಎಂದರು. ಇದನ್ನೂ ಓದಿ: ನನ್ನ ಆರೋಗ್ಯ ಸ್ಥಿರವಾಗಿದೆ, ಸುಧಾರಣೆಗಳ ಸುಂದರ ಕಥೆಗಳನ್ನು ಓದಿಕೊಳ್ಳುತ್ತಿದ್ದೇನೆ: ಹಂಸಲೇಖ