Connect with us

Bengaluru City

ಸ್ಯಾಂಡಲ್‍ವುಡ್ ನಟನಿಗೆ ಗಾಡ್ ಫಾದರ್ ಎಂದ್ರು ಅರ್ಜುನ್ ಜನ್ಯ

Published

on

ಬೆಂಗಳೂರು: ಸ್ಯಾಂಡಲ್‍ವುಡ್‍ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು 99 ಚಿತ್ರಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಶತಕದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಕಿಚ್ಚ ಸುದೀಪ್ ಅವರು ಶುಭಾಶಯನ್ನು ತಿಳಿಸಿದ್ದಾರೆ. ಅದಕ್ಕೆ ಉತ್ತರವಾಗಿ ಅರ್ಜುನ್ ಜನ್ಯ ಅವರು ನೀವು ನನ್ನ ಗಾಡ್ ಫಾದರ್ ಎಂದು ಸುದೀಪ್ ಅವರನ್ನು ಕರೆದಿದ್ದಾರೆ.

ತಮಿಳಿನ ’96’ ಸಿನಿಮಾ ’99’ ಹೆಸರಿನಲ್ಲೇ ಕನ್ನಡಕ್ಕೆ ಬರುತ್ತಿದ್ದು ಈ ಚಿತ್ರದಲ್ಲಿ ಗಣೇಶ್ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೇ ನೆರವೇರಿತ್ತು. ’99’ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನೀಡುತ್ತಿದ್ದಾರೆ. ವಿಶೇಷ ಅಂದರೆ ಈ ಸಿನಿಮಾ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡುತ್ತಿರುವ ನೂರನೇ ಸಿನಿಮಾವಾಗಿದೆ.

ಶತಕದ ಸಂಭ್ರಮದಲ್ಲಿರುವ ಕಾರಣ ನಟ ಸುದೀಪ್ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದರು. ಸುದೀಪ್ ಅವರು, “ನಿಮ್ಮ ಈ ಯಶಸ್ಸಿಗೆ ನೀವು ಅರ್ಹವಾದ ವ್ಯಕ್ತಿಯಾಗಿದ್ದು, ಅದ್ಭುತ ಜರ್ನಿಯ ಸಾಧನೆ ಮಾಡಿದ್ದೀರಿ. ನನ್ನ ಸಿನಿಮಾ ಜೀವನದ ಪಯಣದಲ್ಲೂ ನೀವು ಒಂದು ಭಾಗವಾಗಿದ್ದು, ನನಗೆ ತುಂಬಾ ಖುಷಿಯಾಗಿದೆ. ನೀವು ಒಬ್ಬ ಸಂಗೀತ ನಿರ್ದೇಶಕರಲ್ಲದೇ ಒಬ್ಬ ಮನುಷ್ಯನಾಗಿಯೂ ಪ್ರಬುದ್ಧರಾಗಿದ್ದೀರಿ. ಇದೇ ರೀತಿ ಸದಾ ನಮಗೆ ಮನರಂಜನೆ ನೀಡುತ್ತಿರಿ. ನಿಮ್ಮ ನೂರನೇ ಸಿನಿಮಾಗೆ ಶುಭಾಶಯಗಳು” ಎಂದು ಹೇಳಿ ಟ್ವೀಟ್ ಮಾಡಿದ್ದಾರೆ.

ಸುದೀಪ್ ಟ್ವೀಟ್ ಗೆ ಅರ್ಜುನ್ ಜನ್ಯ ಅವರು, ”ನಿಮ್ಮ ಪ್ರೋತ್ಸಾಹ ಇಲ್ಲದಿದ್ದರೆ ನಾನು ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನೀವು ಯಾವಾಗಲೂ ನನ್ನ ಗಾಡ್ ಫಾದರ್ ಮತ್ತು ಮಾರ್ಗದರ್ಶಿಯಾಗಿದ್ದೀರಿ. ನನ್ನ ಈ ಸಣ್ಣ ಸಾಧನೆಯನ್ನು ಸಂಪೂರ್ಣವಾಗಿ ನಿಮಗೆ ಅರ್ಪಿಸುತ್ತೇನೆ” ಎಂದು ಕೃತಜ್ಞತೆ ತಿಳಿಸಿದ್ದಾರೆ.

ಸುದೀಪ್ ಅಭಿನಯದ ‘ಕೆಂಪೇಗೌಡ’ ಸಿನಿಮಾದಿಂದ ಅರ್ಜುನ್ ಜನ್ಯ ಸಂಗೀತ ಶುರುವಾಗಿದ್ದು, ಸುದೀಪ್ ಕಾಂಬಿನೇಶನ್ ನಲ್ಲಿ ‘ಮಾಣಿಕ್ಯ’, ‘ಮುಕುಂದ ಮುರಾರಿ’ ‘ಹೆಬ್ಬುಲಿ’, ‘ಅಂಬಿ ನಿಂಗೆ ವಯಸ್ಸಾಯ್ತೋ’, ‘ದಿ ವಿಲನ್’ ಚಿತ್ರಗಳಲ್ಲಿ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅಷ್ಟೆ ಅಲ್ಲದೇ ಈಗ ‘ಪೈಲ್ವಾನ್’ ಮತ್ತು ‘ಕೋಟಿಗೊಬ್ಬ 3’ ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *