ಖ್ಯಾತ ಸಂಗೀತ ನಿರ್ದೇಶಕ ಅಲೆಪ್ಪಿ ರಂಗನಾಥ್ ಕೊರೊನಾಗೆ ಬಲಿ

Public TV
1 Min Read
alleppey ranganath

ತಿರುವನಂತಪುರಂ: ಖ್ಯಾತ ಮಲೆಯಾಳಂ ಸಂಗೀತ ಸಂಯೋಜಕ ಅಲೆಪ್ಪಿ ರಂಗನಾಥ್ (73) ಅವರು ಭಾನುವಾರ ರಾತ್ರಿ ಕೊರೊನಾ ಸೋಂಕಿಗೆ ತುತ್ತಾಗಿ ನಿಧನರಾದರು.

ಉಸಿರಾಟದ ಸಮಸ್ಯೆ ಇದ್ದ ಕಾರಣ ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯತ್ತಿದ್ದ ಅವರು ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ:  ಮಾನ್ಯ ಡಿಕೆಶಿ ಅವರೇ, ನಿಮ್ಮ ಆರೋಗ್ಯ ಹೇಗಿದೆ?: ಬಿಜೆಪಿ

CORONA 1

ಭಕ್ತಿಗೀತೆಗಳನ್ನು ಒಳಗೊಂಡಂತೆ ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ 2000ಕ್ಕೂ ಹೆಚ್ಚು ಹಾಡುಗಳನ್ನು ಸಂಯೋಜಿಸಿದ್ದಾರೆ. ಅವರು ಈ ವರ್ಷದ ‘ಹರಿವರಾಸನಂ ಪ್ರಶಸ್ತಿ’ ಪಡೆದಿದ್ದರು. ರಂಗನಾಥ್ ಅವರು ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯವನ್ನು ಕಲಿತಿದ್ದಾರೆ. ಅವರ ಪತ್ನಿ ಬಿ ರಾಜಶ್ರೀ ಅವರು ಶಾಸ್ತ್ರೀಯ ನೃತ್ಯಗಾರ್ತಿ ಮತ್ತು ಶಿಕ್ಷಕಿಯಾಗಿದ್ದಾರೆ.

ರಂಗನಾಥ್ ಅವರು 1973ರಲ್ಲಿ ಬಿಡುಗಡೆಯಾದ ‘ಜೀಸಸ್’ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಈ ಚಿತ್ರವನ್ನು ಪಿ.ಎ ಥಾಮಸ್ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ‘ಗಾಗುಲತಾ ಮಲಕಲೆ’ ಹಾಡನ್ನು ಅವರು ರಚಿಸಿದ್ದಾರೆ. ರಂಗನಾಥ್ ಅವರು 25ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅವರು ಬರೆದ ಹೆಚ್ಚಿನ ಹಾಡುಗಳನ್ನು ಪ್ರಸಿದ್ಧ ಗಾಯಕ ಕೆ.ಜೆ ಯೇಸುದಾಸ್ ಹಾಡಿದ್ದಾರೆ. ಇದನ್ನೂ ಓದಿ: ಒಬಿಸಿ ನಾಯಕರಿಂದ ಬಿಜೆಪಿಗೆ ರಾಜೀನಾಮೆ – ದಲಿತರ ಮನೆಯಲ್ಲಿ ಊಟ ಮಾಡಿದ ಯೋಗಿ

jisus movie

ಅವರು ಪ್ರಿನ್ಸಿಪಲ್ ಒಲಿವಿಲ್, ಮಾಮಲಕಲ್ಕಪ್ಪುರತ್, ಪಪ್ಪನ್ ಪ್ರಿಯಪ್ಪೆಟ್ಟ ಪಪ್ಪನ್, ಆರಂತೆ ಮುಳ್ಳ ಕೊಚ್ಚು ಮುಲ್ಲಾ ಮತ್ತು ಇನ್ನೂ ಹೆಚ್ಚಿನ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. 1984ರಲ್ಲಿ ತೆರೆಕಂಡ ಆರಾಂಟೆ ಮುಲ್ಲಾ ಕೊಚ್ಚು ಮುಲ್ಲಾ ಚಿತ್ರಕ್ಕೆ ಅವರು ರಚಿಸಿದ ಕತ್ತಿಲ್ ಕೊಡುಂ ಕಟ್ಟಿಲ್ ಹಾಡು ಜನಪ್ರಿಯತೆ ಗಳಿಸಿ ಇಂದಿಗೂ ಮಲೆಯಾಳಂನ ಕ್ಲಾಸಿಕ್ ಹಾಡುಗಳಲ್ಲಿ ಒಂದಾಗಿದೆ.

ಸಂಗೀತ ಸಂಯೋಜನೆಯ ಹೊರತಾಗಿ, ರಂಗನಾಥ್ ಅವರು 42 ಕ್ಕೂ ಹೆಚ್ಚು ರಂಗ ನಾಟಕಗಳನ್ನು ಬರೆದಿದ್ದಾರೆ. 25 ನೃತ್ಯ ನಾಟಕಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅವರು ಇತ್ತೀಚೆಗೆ ಬೈಬಲ್ ಆಧರಿಸಿ ಕರ್ನಾಟಕ ಸಂಗೀತದಲ್ಲಿ 10 ಹಾಡು ಬರೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *