ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ (A.R.Rahman) ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಎದೆನೋವಿನಿಂದ ಬಳಲುತ್ತಿದ್ದ ಅವರು ಈಗ ಆರೋಗ್ಯವಾಗಿದ್ದಾರೆ. ಇದನ್ನೂ ಓದಿ:ಇಂದು ಸುಮಲತಾ ಅಂಬರೀಶ್ ಮೊಮ್ಮಗನ ನಾಮಕರಣ – ಸಮಾರಂಭಕ್ಕೆ ಮನೆಮಗ ದರ್ಶನ್ ಬರ್ತಾರಾ?
ಎ.ಆರ್.ರೆಹಮಾನ್ ಅವರ ಆರೋಗ್ಯ ಸ್ಥಿತಿ ಹೇಗಿದೆ? ಎಂಬುದನ್ನು ಖುದ್ದು ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಎ.ಆರ್. ರೆಹಮಾನ್ ಆರೋಗ್ಯವಾಗಿದೆ. ಚಿಂತೆಪಡುವ ಅವಶ್ಯಕತೆಯಿಲ್ಲ, ಅವರು ಆರಾಮಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ರೆಹಮಾನ್ ಪುತ್ರ ಎ.ಆರ್.ಅಮೀನ್ ತಂದೆಯ ಆರೋಗ್ಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರೀತಿಯ ಅಭಿಮಾನಿಗಳು ನಿಮ್ಮೆಲ್ಲರ ಬೆಂಬಲಕ್ಕಾಗಿ ಧನ್ಯವಾದಗಳು. ನಿರ್ಜಲೀಕರಣದಿಂದ ನನ್ನ ತಂದೆ ಸ್ವಲ್ಪ ನಿಶ್ಯಕ್ತಿ ಹೊಂದಿದ್ದರು. ಆದ್ದರಿಂದ ನಾವು ಅವರಿಗೆ ಕೆಲವು ಪರೀಕ್ಷೆಗಳನ್ನು ಮಾಡಿಸಿದೆವು. ಆದರೆ ಅವರು ಈಗ ಚೆನ್ನಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್ ನಿರಾಳವಾಗಿದ್ದಾರೆ.
ಎದೆನೋವಿನಿಂದ ಬಳಲುತ್ತಿದ್ದ ರೆಹಮಾನ್ ಅವರನ್ನು ಇಂದು ಬೆಳಗ್ಗೆ 7:30ಕ್ಕೆ ಆಸ್ಪತ್ರೆಗೆ ದಾಖಲಿಸಿದ್ದರು. ಇಸಿಜಿ ಮತ್ತು ಎಕೋಕಾರ್ಡಿಯೋಗ್ರಾಮ್ ಸೇರಿದಂತೆ ಕೆಲವು ಪರೀಕ್ಷೆಗಳಿಗೆ ಒಳಪಡಿಸಿದ್ದರು.
ಕಳೆದ ತಿಂಗಳು, ಎಆರ್ ರೆಹಮಾನ್ ಚೆನ್ನೈನಲ್ಲಿ ನಡೆದ ತಮ್ಮ ಸಂಗೀತ ಕಚೇರಿಯಲ್ಲಿ ಎಡ್ ಶೀರನ್ ಅವರೊಂದಿಗೆ ಪ್ರದರ್ಶನ ನೀಡಿದ್ದರು. ಒಂದು ವಾರದ ನಂತರ, ಅವರು ‘ಛಾವಾ’ ಸಿನಿಮಾದ ಸಂಗೀತ ಬಿಡುಗಡೆ ಸಮಾರಂಭದಲ್ಲಿಯೂ ಕಾಣಿಸಿಕೊಂಡಿದ್ದರು.
ಸುಮಾರು 29 ವರ್ಷಗಳ ದಾಂಪತ್ಯಕ್ಕೆ ಕಳೆದ ವರ್ಷ ನವೆಂಬರ್‌ನಲ್ಲಿ ಸೈರಾ ಬಾನು ಮತ್ತು ಎಆರ್ ರೆಹಮಾನ್ ಅಂತ್ಯ ಹಾಡಿದ್ದರು. ಇಬ್ಬರೂ ಡಿವೋರ್ಸ್ ಪಡೆದಿದ್ದರು.