ಅಣಬೆಗಳು ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಇದನ್ನು ನಮ್ಮ ದಿನನಿತ್ಯದ ಆಹಾರಗಳಲ್ಲಿ ಬಳಸುವುದರಿಂದ ಕಣ್ಣಿನ ದೃಷ್ಟಿ ಉತ್ತಮವಾಗಿರುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಮಕ್ಕಳಿಗೆ ಹಾಗೂ ದೊಡ್ಡವರೂ ಇಷ್ಟಪಡುವ ಮಶ್ರೂಮ್ ಸ್ಯಾಂಡ್‌ವಿಚ್ ಯಾವರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಗೋಬಿ ಪೆಪ್ಪರ್ ಡ್ರೈ ರೆಸಿಪಿ ನಿಮಗಾಗಿ
Advertisement
ಬೇಕಾಗುವ ಸಾಮಗ್ರಿಗಳು:
ಹೆಚ್ಚಿದ ಅಣಬೆಗಳು – 250 ಗ್ರಾಂ
ಹೆಚ್ಚಿದ ಈರುಳ್ಳಿ- 1
ಹೆಚ್ಚಿದ ಬೆಳ್ಳುಳ್ಳಿ – 1
ಚಿಲ್ಲಿ ಫ್ಲೇಕ್ಸ್ – 1 ಚಮಚ
ಒರೆಗಾನೋ – 1 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಬ್ರೆಡ್ – 4
ತುರಿದ ಚೀಸ್ – ಕಾಲು ಕಪ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಅದಕ್ಕೆ ಹೆಚ್ಚಿದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹಾಕಿಕೊಂಡು ಹಸಿವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ.
* ಬಳಿಕ ಇದಕ್ಕೆ ಹೆಚ್ಚಿದ ಮಶ್ರೂಮ್ ಹಾಕಿಕೊಂಡು ಚನ್ನಾಗಿ ಫ್ರೈ ಮಾಡಿಕೊಳ್ಳಬೇಕು.
* ಈಗ ಇದಕ್ಕೆ ಉಪ್ಪು, ಚಿಲ್ಲಿ ಫ್ಲೇಕ್ಸ್ ಮತ್ತು ಒರೆಗಾನೋ ಹಾಕಿಕೊಂಡು ತಿರುವಿಕೊಳ್ಳಿ.
* ಬಳಿಕ ಈ ಮಿಶ್ರಣಕ್ಕೆ ತುರಿದ ಚೀಸ್ ಅನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ನಂತರ ಒಂದು ಬ್ರೆಡ್ ಮೇಲೆ ಈ ಮಿಶ್ರಣವನ್ನು ಹದವಾಗಿ ಹಾಕಿಕೋಂಡು ಇನ್ನೊಂದು ಬ್ರೆಡ್‌ನ ಸಹಾಯದಿಂದ ಮುಚ್ಚಿ.
* ಬಳಿಕ ಇದನ್ನು ಸ್ಯಾಂಡ್‌ವಿಚ್ ಮೇಕರ್ ಅಥವಾ ಗ್ರಿಲ್ ಪ್ಯಾನ್‌ನಲ್ಲಿ ಇಟ್ಟು ಬಿಸಿಮಾಡಿಕೊಳ್ಳಿ.
* ಈಗ ಟೇಸ್ಟಿ ಮಶ್ರೂಮ್ ಸ್ಯಾಂಡ್‌ವಿಚ್ ತಿನ್ನಲು ರೆಡಿ. ಇದನ್ನೂ ಓದಿ: ಮನೆಯಲ್ಲೇ ಟ್ರೈ ಮಾಡಿ ಆರೋಗ್ಯಕರ ದಾಸವಾಳ ಟೀ
Advertisement
Web Stories