ರಾಯಚೂರು: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಸರಿಯಲ್ಲ, ರಾಜಕಾರಣಿಗಳು ಪ್ರಾಮಾಣಿಕತೆ ಸಂವಿಧಾನಿಕ ಬದ್ಧತೆ ಪ್ರದರ್ಶಿಸಬೇಕು ಅಂತ ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀಗುರುಸಿದ್ದೇಶ್ವರ ರಾಜಯೋಗಿಂದ್ರ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನಲ್ಲಿ ಒಂದು ಕಡೆ ಬರ ಹಾಗು ಇನ್ನೊಂದು ಕಡೆ ಪ್ರವಾಹವಾಗಿದೆ. ಎರಡು ಸಹ ರೈತರಿಗೆ ಬರದ ಅನುಭವ ನೀಡುತ್ತಿವೆ.ದೇವರು ಪ್ರಕೃತಿ ವಿಕೋಪ ನೀಗಿಸುವಂತೆ ಪ್ರಾರ್ಥಿಸುತ್ತೇವೆ. ನಾಡಿನಲ್ಲಿ ಪ್ರಕೃತಿ ವಿಕೋಪವಿರುವಾಗ ರಾಜಕೀಯ ಕಚ್ಚಾಟ ನಡೆಯುತ್ತಿರುವುದು ಸರಿಯಲ್ಲ. ರಾಜಕೀಯ ಮೇಲಾಟ ಬಿಟ್ಟು ಜನರ ನೆರವಿಗೆ ಬರಬೇಕು.ಈಗ ನಡೆಯುತ್ತಿರುವ ರಾಜಕೀಯ ಪಕ್ಷಗಳ ವರ್ತನೆ ಸರಿಯಲ್ಲ ಅಂದ್ರು.
ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಜನರು ಉತ್ತರ ನೀಡಿದ್ದಾರೆ. ಈ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಅಂತ ಅವರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv