ಚಿತ್ರದುರ್ಗ: ಮುರುಘಾಶ್ರೀ (Murugha shree) ವಿರುದ್ಧ ಪಿತೂರಿ ನಡೆದಿದ್ಯಾ ಅನ್ನೋ ಅನುಮಾನ ಶುರುವಾಗಿದೆ. 2ನೇ ಪೋಕ್ಸೋ ಕೇಸ್ ದೂರು ನೀಡಿದ್ದ ಮಹಿಳೆಯನ್ನೇ ಇದೀಗ ಬಂಧಿಸಲಾಗಿದೆ.
ಮುರುಘಾಶ್ರೀ ವಿರುದ್ಧ ದೂರು ನೀಡಿದ್ದ ಮಠದ ಅಡುಗೆ ಸಹಾಯಕಿಯನ್ನ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು (Police) ಬಂಧಿಸಿದ್ದಾರೆ. ಮುರುಘಾಶ್ರೀ ವಿರುದ್ಧ ಮೊದಲ ಕೇಸ್‍ನ ತನಿಖೆ ಮುಗಿಸಿರುವ ಪೊಲೀಸರು ಕೋರ್ಟ್‍ಗೆ ಚಾರ್ಜ್‍ಶೀಟ್ (Charge sheet) ಸಲ್ಲಿಸಿದ್ರು. ಇದರ ಬೆನ್ನಲ್ಲೇ ಜೈಲಲ್ಲಿರುವ ಮುರುಘಾಶ್ರೀ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿತ್ತು.
Advertisement
Advertisement
ಇತ್ತೀಚೆಗೆ ವೈರಲ್ ಆಗಿದ್ದ ಮಠದ ಶಿಕ್ಷಕ ಬಸವರಾಜೆಂದ್ರ (Basavarajendra) ಹಾಗೂ ಬಾಲಕಿಯೊಬ್ಬಳು ಮುರುಘಾ ಶ್ರೀ ವಿರುದ್ಧ ಸುಳ್ಳು ಕೇಸ್ ದಾಖಲಿಸುವಂತೆ ಪ್ರಚೋದಿಸಿದ್ದ ಆಡಿಯೋ ಎಲ್ಲೆಡೆ ಭಾರೀ ಕೋಲಾಹಲ ಸೃಷ್ಟಿಸಿತ್ತು. ಹೀಗಾಗಿ ಆ ಆಡಿಯೋ (Audio) ಕೇಳಿದ್ದ ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರನ್ನು ನೀಡಿದರು.
Advertisement
Advertisement
ಈ ಆಡಿಯೋದಲ್ಲಿ ಮುರುಘಾ ಶ್ರೀಯನ್ನು ಖೆಡ್ಡಾಗೆ ಬೀಳಿಸಲು ಷಡ್ಯಂತ್ರ ನಡೆದಿದೆ. ಹೀಗಾಗಿ ಆಡಿಯೋ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದಿದ್ರು. ಇದೀಗ ಎರಡನೇ ಕೇಸ್ ವಿಚಾರಣೆಗೆಂದು ಮೈಸೂರಿನ ಒಡನಾಡಿ ಸಂಸ್ಥೆಯಿಂದ ಕರೆತಂದಿದ್ದ ಮಠದ ಅಡುಗೆ ಸಹಾಯಕಿಯನ್ನು ವಿಚಾರಣೆ ಬಳಿಕ ಮುರುಘಾಶ್ರೀ ವಿರುದ್ಧದ ಪಿತೂರಿ ಕೇಸ್‍ನಲ್ಲಿ ದಿಢೀರ್ ಅಂತ ಬಂಧಿಸಿದ್ದಾರೆ.