ಚಿತ್ರದುರ್ಗ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶ್ರೀಗಳು ಪುರುಷತ್ವ ಪರೀಕ್ಷೆಯಲ್ಲಿ ಫಿಟ್ ಆಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಶ್ರೀಗಳ ವೈದ್ಯಕೀಯ ವರದಿ ಬಹಿರಂಗವಾಗಿದ್ದು, ಪುರುಷತ್ವ ಪರೀಕ್ಷೆಯಲ್ಲಿ ಶ್ರೀಗಳು ಫಿಟ್ ಆಗಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಪ್ರಶ್ನೆಗೆ ಉತ್ತರಿಸಲು ತಡಪಡಿಸಿದ ಜಿಲ್ಲಾಧಿಕಾರಿಗೆ ಸೀತಾರಾಮನ್ ಕ್ಲಾಸ್ – ಕೆಟಿಆರ್ ಆಘಾತ
Advertisement
Advertisement
ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಫಿಜಿಷಿಯನ್ ಡಾ.ಸತೀಶ್, ಮಾನಸಿಕ ತಜ್ಞೆ ಶೋಭಾ ಹಾಗೂ ವೇಣುಗೋಪಾಲ್ ಸಮ್ಮುಖದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಕೊಠಡಿ ಸಂಖ್ಯೆ 15ರಲ್ಲಿ ತಪಾಸಣೆ ನಡೆಸಲಾಗಿದ್ದು, ಶ್ರೀಗಳ ಉಗುರು, ಒಳ ಉಡುಪಿನ ತುಂಡು ಬಟ್ಟೆ, ಮರ್ಮಾಂಗದ ಬಳಿಯ ಕೂದಲನ್ನು ಪರೀಕ್ಷೆ ಮಾಡಲಾಗಿದೆ.
Advertisement
Advertisement
ಶ್ರೀಗಳಿಗೆ ಹೃದಯ ಸಂಬಂಧಿ ತೊಂದರೆಯಿರುವುದರಿಂದ ಮತ್ತೊಮ್ಮೆ ಇಸಿಜಿ ಪರೀಕ್ಷೆ ಮಾಡಲಾಗಿದೆ. ಜಿಲ್ಲಾ ಸರ್ಜನ್ ಬಸವರಾಜ್ ನೇತೃತ್ವದಲ್ಲಿ ಶ್ರೀಗಳಿಗೆ ತಪಾಸಣೆ ಮಾಡಲಾಗಿದೆ ಇಂದು ಅಧಿಕೃತ ವರದಿ ಹೊರಬೀಳಲಿದೆ. ಸದ್ಯ ಈಗಾಗಲೇ ಶ್ರೀಗಳ ವರದಿ ಪಾಸಿಟಿವ್ ಆಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕ್ರಿಕೆಟ್ ಪ್ರಿಯರಿಗೆ ನಾಳೆ ಸೂಪರ್ ಸಂಡೇ – ಕದನ ಕುತೂಹಲ ಮೂಡಿಸಿದ ಇಂಡೋ-ಪಾಕ್ ಹೋರಾಟ
ವೈದ್ಯಕೀಯ ತಪಾಸಣೆ ಬಳಿಕ ಜಿಲ್ಲಾಸ್ಪತ್ರೆಯಿಂದ ಡಿವೈಎಸ್‌ಪಿ ಕಚೇರಿ ಶಿಫ್ಟ್ ಮಾಡಲಾಗಿದ್ದು, ಡಿವೈಎಸ್‌ಪಿ ಕಚೇರಿಯಲ್ಲಿ ವಿಚಾರಣೆ ಮುಂದುವರಿದಿದೆ. ಚಾರ್ಜ್ ಶೀಟ್ ಜೊತೆಯಲ್ಲೇ ವೈದ್ಯರ ರಿಪೋರ್ಟ್ ಸಹ ಸಲ್ಲಿಸಲಿರುವ ಪೊಲೀಸಲಿದ್ದಾರೆ. ಮುರುಘಾ ಮಠದ ಸ್ಥಳ ಮಹಜರು ಮಾಡಿಸುವ ಸಾಧ್ಯತೆ ಇದ್ದು, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.