ವಿಜಯಪುರ: ವಿಜಯೇಂದ್ರ ಸಿಎಂ ಆಗಲಿ. ಸಿಎಂ ಮಗ ಸಿಎಂ ಆದರೆ ತಪ್ಪೇನು ಎಂದು ಸಚಿವ ಮುರುಗೇಶ್ ನಿರಾಣಿ ಅಭಿಪ್ರಾಯಪಟ್ಟರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರಗೆ ನಾಯಕನಾಗುವ ಎಲ್ಲಾ ಕ್ವಾಲಿಟಿ ಇವೆ. ಏನೇ ಜವಾಬ್ದಾರಿ ನೀಡುವುದು ಹೈಕಮಾಂಡ್‍ಗೆ ಬಿಟ್ಟಿದ್ದು. ಯಾರ ಹಣೆ ಬರಹದಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ ಎಂದರು.
ನಮ್ಮ ರಾಜ್ಯದಲ್ಲಿದ್ದವರು ಪ್ರಧಾನಿಯಾದವರ ಮಗನೂ ಮುಖ್ಯಮಂತ್ರಿ ಆಗಿದ್ದಾರೆ. ಅದೇ ರೀತಿ ಮುಖ್ಯಮಂತ್ರಿ ಮಗ ಮುಖ್ಯಮಂತ್ರಿ ಆದ್ರೆ ಏನ್ ತಪ್ಪಿದೆ. ಅದನ್ನು ನಿರ್ಧಾರ ಮಾಡುವವರು ರಾಜ್ಯ, ರಾಷ್ಟ್ರ ನಾಯಕರಿದ್ದಾರೆ. ಎಲ್ಲಾ ಕ್ವಾಲಿಟಿಗಳು ವಿಜಯೇಂದ್ರಗೆ ಇದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮೇಕೆದಾಟು ವ್ಯಾಜ್ಯ – ಸುಪ್ರೀಂಕೋರ್ಟ್‍ಗೆ ತಮಿಳುನಾಡು ಅಫಿಡೆವಿಟ್
ಬಿಎಸ್‍ವೈ ಬಗ್ಗೆ ಕಾಂಗ್ರೆಸ್ ಮಾತನಾಡಿರುವುದು ಸರಿಯಿಲ್ಲ. ಕಾಂಗ್ರೆಸ್ ಮೊದಲು ಅವರ ಪಕ್ಷ ಸರಿ ಮಾಡಿಕೊಳ್ಳಲಿ. ಯಡಿಯೂರಪ್ಪ ನಮ್ಮ ಪಕ್ಷದ ಮುಖಂಡರು. ಹಾಗೇ ಬಿಜೆಪಿಯಿಂದ ಒಂದು ಕುಟುಂಬದಲ್ಲಿ ಮೂವರಿಗೆ ಸೀಟ್ ನೀಡಿದ್ದು, ದೇಶದ ಇತಿಹಾಸದಲ್ಲೇ ಇಲ್ಲ. ಇದು ಎಲ್ಲರಿಗೂ ಗೊತ್ತಿದೆ. ವಿಜಯೇಂದ್ರ ಹೆಚ್ಚಿನ ಕೆಲಸ ಮಾಡಲಿ, ಬೆಳೆಯಲಿ ಎನ್ನುವುದು ಇದೆ. ಮುಂದೆ ಯಡಿಯೂರಪ್ಪ, ಸಂಘ ಪರಿವಾರ, ಹಿರಿಯರ ಆಶೀರ್ವಾದ, ಮಾರ್ಗದರ್ಶನದಿಂದ ಎತ್ತರಕ್ಕೆ ಬೆಳೆಯುತ್ತಾನೆ ಎಂದು ಅಭಿಮತ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಳೆಯಿಂದ ಪಿಯುಸಿ ತರಗತಿಗಳು ಪ್ರಾರಂಭ- ಹಿಜಬ್ ನಿಷೇಧ