Bengaluru City

ಆಭರಣ ವಲಯದಲ್ಲಿ ಬಂಡವಾಳ ಹೂಡುವವರಿಗೆ ರಿಯಾಯ್ತಿ ಘೋಷಿಸಿದ ನಿರಾಣಿ

Published

on

Share this

-ಉದ್ಯಮಿಗಳಿಗೆ ಸರ್ಕಾರದಿಂದ ಅಗತ್ಯ ನೆರವು
-ಕಲಬುರಗಿ ಮತ್ತು ಕನಕಪುರದಲ್ಲಿ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆ

ಬೆಂಗಳೂರು: ರಾಜ್ಯದಲ್ಲಿ ಆಭರಣ ವಲಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಉದ್ಯಮಿಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಸಂಪೂರ್ಣ ಸಹಕಾರ ಹಾಗೂ ತೆರಿಗೆ ವಿನಾಯ್ತಿಯನ್ನು ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಆರಂಭವಾಗಿರುವ ಅಂತಾರಾಷ್ಟ್ರೀಯ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಭರಣ ವಲಯದಲ್ಲಿ ಯಾರೇ ಉದ್ಯಮಿಗಳು ಬಂಡವಾಳ ಹೂಡಲು ಮುಂದೆ ಬಂದರೆ ನಮ್ಮ ಸರ್ಕಾರ ಸಂಪೂರ್ಣವಾಗಿ ಸಹಕಾರ ಕೊಡಲಿದೆ. ಅಗತ್ಯವಾದ ನೆರವು ಜೊತೆಗೆ ರಿಯಾಯ್ತಿಯನ್ನು ನೀಡಲಾಗುವುದು ಎಂದು ಘೋಷಿಸಿದರು. ರಫ್ತು ಗುರಿ ಸಾಧಿಸುವಲ್ಲಿ ರತ್ನಗಳು ಮತ್ತು ಆಭರಣ ವಲಯವು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಬಂಡವಾಳ ಹೂಡಲು ಬರುವ ಉದ್ಯಮಿಗಳಿಗೆ ನಾವು ಮುಕ್ತ ಸ್ವಾಗತಕೋರಿ ಕೆಂಪು ರತ್ನಗಂಬಳಿ ಹಾಕುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಇಲಿ ವಿಷದಿಂದ ಹಲ್ಲುಜ್ಜಿ ಪ್ರಾಣ ಬಿಟ್ಟ 18ರ ಯವತಿ

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಇಂಡಿಯಾ ಇಂಟರ್‍ ನ್ಯಾಷನಲ್ ಜ್ಯುವೆಲ್ಲರಿ ಶೋ(ಐಐಜೆಎಸ್) ಪ್ರೀಮಿಯರ್ 2021 ಆಯೋಜಿಸಿದ್ದಕ್ಕಾಗಿ ಸಂಘಟಕರಿಗೆ ಧನ್ಯವಾದ ಸಲ್ಲಿಸಿದ ನಿರಾಣಿ, ರಫ್ತು ಗುರಿ ಸಾಧಿಸುವಲ್ಲಿ ಜೆಮ್ಸ್ ಮತ್ತು ಆಭರಣ ವಲಯವು ಪ್ರಮುಖ ಪಾತ್ರ ವಹಿಸಿದೆ. ಈ ಪ್ರತಿಷ್ಠಿತ ಕಾರ್ಯಕ್ರಮವನ್ನು ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾದ ಬೆಂಗಳೂರುನಲ್ಲಿ ಆಯೋಜಿಸಿದ್ದಕ್ಕಾಗಿ ನಾನು ಸಂಘಟಕರಿಗೆ ಧನ್ಯವಾದ ಅರ್ಪಿಸುತ್ತೇನೆ. ಮುಂಬೈನ ಹೊರಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದೇ ಮೊದಲು. ಕರ್ನಾಟಕಕ್ಕೆ ಈ ಅದ್ಭುತ ಅವಕಾಶ ಒದಗಿಸಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದು 37 ನೇ ಐಐಜೆಎಸ್ ಕಾರ್ಯಕ್ರಮವಾಗಿದ್ದು, ಈ ಹಿಂದೆ 36 ಕಾರ್ಯಕ್ರಮಗಳು ಮುಂಬೈನಲ್ಲಿ ನಡೆದಿವೆ. ಮುಂದಿನ ವರ್ಷವೂ ಬೆಂಗಳೂರಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲು ಸಚಿವರು ಸಂಘಟಕರನ್ನು ಆಹ್ವಾನಿಸಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ 400 ಬಿಲಿಯನ್ ಡಾಲರ್ ಸರಕು ರಫ್ತು ಮಾಡುವ ಗುರಿಯನ್ನು ಸಾಧಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ಕರ್ನಾಟಕ ಬದ್ಧವಾಗಿದೆ ಮತ್ತು ಈ ಪ್ರಯತ್ನದಲ್ಲಿ ರತ್ನಗಳು ಮತ್ತು ಆಭರಣ ವಲಯವು ನಿರ್ಣಾಯಕ ಪಾತ್ರ ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ನಾನು ನಂಬುತ್ತೇನೆ. ವಸ್ತುಪ್ರದರ್ಶನದಲ್ಲಿ 2,500 ಕ್ಕೂ ಹೆಚ್ಚು ಸ್ಟಾಲ್‍ಗಳನ್ನು ಸ್ಥಾಪಿಸಲಾಗಿದೆ, 1300 ಪ್ರದರ್ಶಕರು ಮತ್ತು 10,000 ಕಂಪನಿಗಳು ಭಾಗವಹಿಸಲು ನೋಂದಾಯಿಸಿವೆ. 20,000 ಕ್ಕೂ ಹೆಚ್ಚು ಜನರು ಪ್ರದರ್ಶನಕ್ಕೆ ಭೇಟಿ ನೀಡಿದ್ದು, ಸಚಿವರು ಹಲವಾರು ಮಳಿಗೆಗಳಿಗೆ ಭೇಟಿ ನೀಡಿ, ವ್ಯಾಪಾರ ಮುಖಂಡರು ಮತ್ತು ವೃತ್ತಿಪರರೊಂದಿಗೆ ಸಂವಾದ ನಡೆಸಿದರು. ಉದ್ಯಮಿಗಳಾಗುವಂತೆ ಪ್ರೋತ್ಸಾಹಿಸಿ ಉದ್ಯೋಗ ಹುಡುಕುವವರ ಬದಲಿಗೆ ಉದ್ಯೋಗ ಒದಗಿಸುವವರ ಕಡೆಗೆ ಗಮನಹರಿಸುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದರು. ಇದನ್ನೂ ಓದಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ಸಂಪೂರ್ಣ ನಿಷೇಧ

ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್, ವಾಣಿಜ್ಯ ಮತ್ತು ಕೈಗಾರಿಕಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ ರಮಣ ರೆಡ್ಡಿ, ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಸಿ.ಐ ಎಲ್ ಸುರೇಶ್ ಕುಮಾರ್,ಜಿಜೆಇಪಿಸಿ ಅಧ್ಯಕ್ಷ ಕಾಲಿನ್ ಶಾ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement