ಅಯೋಧ್ಯೆ: ರಾಮಮಂದಿರ (Ayodhya Ram Mandir) ಲೋಕಾರ್ಪಣೆಗೆ ಇನ್ನು 18 ದಿನ ಮಾತ್ರ ಉಳಿದಿದೆ. ಇಡೀ ಅಯೋಧ್ಯಾ ನಗರಿ ಸರ್ವಾಂಗ ಸುಂದರವಾಗಿ ರೆಡಿಯಾಗ್ತಿದೆ. ಮಂದಿರದ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದೆ. ಗ್ರೌಂಡ್ ಫ್ಲೋರ್ ಕೆಲಸಗಳು ಈಗಾಗಲೇ ಪೂರ್ಣಗೊಂಡಿದೆ. ಈಗಾಗಲೇ ಮಂದಿರ ರೂಪ ಸಿಕ್ಕಿದೆ. ಈ ಸಂಬಂಧ ಶ್ರೀರಾಮಮಂದಿರ ತೀರ್ಥ ಟ್ರಸ್ಟ್ ಮಂದಿರದ ಪ್ರಮುಖ ವಿಶೇಷಗಳನ್ನು ಹಂಚಿಕೊಂಡಿದೆ.
Advertisement
ಈ ಸಂಬಂಧ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಿಂದ ಎಕ್ಸ್ ಮಾಡಲಾಗಿದೆ. ಈ ಮೂಲಕ ಪ್ರವೇಶ ದ್ವಾರದಲ್ಲಿ ಆನೆ (Elephant), ಸಿಂಹ (Lion), ಹನುಮಾನ್ (hanuman) ಮತ್ತು ಗರುಡ ಮೂರ್ತಿಗಳ (Garuda) ಫೋಟೋ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಈ ಪ್ರತಿಮೆಗಳನ್ನು ರಾಜಸ್ಥಾನದ ಬನ್ಸಿ ಪಹಾರ್‍ಪುರ ಗ್ರಾಮದ ತಿಳಿ ಗುಲಾಬಿ ಬಣ್ಣದ ಮರಳುಗಲ್ಲಿನಿಂದ ಮಾಡಲಾಗಿದೆ ಎಂದು ಎಕ್ಸ್ ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ದಿನದವರೆಗೆ ಯುಪಿ ಸರ್ಕಾರಿ ಬಸ್‌ಗಳಲ್ಲಿ ರಾಮ ಭಜನೆ ಪ್ರಸಾರ
Advertisement
Advertisement
ಪೂರ್ವ ದಿಕ್ಕಿನಲ್ಲಿರುವ ಮಂದಿರದ ಪ್ರಧಾನ ಪ್ರವೇಶದ್ವಾರವಾದ ಸಿಂಹದ್ವಾರವನ್ನು ಅನಾವರಣ ಮಾಡಿದೆ. ಯಾರೇ ಆಗಲಿ ಈ ಸಿಂಹದ್ವಾರದ ಮೂಲಕ ಮಂದಿರ ಪ್ರವೇಶಿಸಬೇಕು. ಇದಕ್ಕೆ 32 ಮೆಟ್ಟಿಲುಗಳಿವೆ. ಮಂದಿರದ ಸನಿಹದಲ್ಲೇ ಇರುವ ಪುರಾತನ ಸೀತಾಬಾವಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಅಯೋಧ್ಯೆಯಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಇದ್ದ ಬಾಲರಾಮನ ದರ್ಶನದ ಅವಧಿಯನ್ನು ವಿಸ್ತರಿಸಲು ಟ್ರಸ್ಟ್ ಮುಂದಾಗಿದೆ. ಹೀಗಾಗಿ ತಂಪಾದ ಬೆಳದಿಂಗಳಲ್ಲೂ ರಾಮ್‍ಲಲ್ಲಾ ದರ್ಶನ ಪಡೆಯುವ ಸೌಭಾಗ್ಯ ಭಕ್ತರಿಗೆ ಸಿಗಲಿದೆ. ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನೆಯಂದು ಇಡೀ ದಿನ ಪ್ರಧಾನಿ ಮೋದಿ ಉಪವಾಸ!
Advertisement
ಜೊತೆಗೆ ಬಾಲರಾಮನಿಗೆ ಮಂಗಳ, ಶಯನ ಆರತಿಗಳನ್ನು ಆರಂಭಿಸಲಾಗುತ್ತದೆ. ಇದೇ ವೇಳೆ ರಾಮಮಂದಿರದ ಭದ್ರತೆಗೆ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಅಳವಡಿಸಲು ತೀರ್ಮಾನಿಸಲಾಗಿದೆ. ಮಂದಿರ ಲೋಕಾರ್ಪಣೆ ದಿನ ಉತ್ತರಪ್ರದೇಶ ಪೊಲೀಸರು, ಪ್ಯಾರಾಮಿಲಿಟರಿ ಸೇರಿ 11ಸಾವಿರ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುತ್ತದೆ. ಜೊತೆಗೆ ಹೆಚ್ಚಿನ ನಿಗಾವಹಿಸಲು, ಪ್ರತಿಯೊಬ್ಬರ ಚಲನವಲನದ ಮೇಲೆ ನಿಗಾ ಇಡಲು ಎಐ ಟೆಕ್ನಾಲಜಿ ಬಳಸಿಕೊಳ್ಳಲಾಗುತ್ತದೆ.
ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ದಿನ ಮಂದಿರಕ್ಕೆ ಬರುವ ಭಕ್ತರಿಗೆ ಏಲಕ್ಕಿ ಮತ್ತು ಸಕ್ಕರೆಯಿಂದ ತಯಾರಿಸಿದ ಪ್ರಸಾದ ವಿತರಿಸಲು ದೇಗುಲದ ಆಡಳಿತ ಮಂಡಳಿ ತೀರ್ಮಾನಿಸಿದೆ. ಇದಕ್ಕಾಗಿ 5 ಲಕ್ಷ ಪ್ರಸಾದ ಪಾಕೆಟ್‍ಗಳನ್ನು ಸಿದ್ದ ಮಾಡಲಾಗುತ್ತಿದೆ.