ಬೆಂಗಳೂರು: ಅಮೃತಹಳ್ಳಿಯ ದಾಸರಹಳ್ಳಿಯಲ್ಲಿ (Amruthahalli Dasarahalli) ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಮಚ್ಚಿನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದ ಹಂತಕನನ್ನು ಅಮೃತಹಳ್ಳಿ ಪೊಲೀಸರು ಬಂಧನ ಮಾಡಿದ್ದಾರೆ.
ಸಮಿತ್ ಬಂಧಿತ ಆರೋಪಿ. ಈತ ಕೊಲೆ ಮಾಡಿದ ಬಳಿಕ ಬಟ್ಟೆ ಬದಲಿಸಿಕೊಂಡು ಮನೆಯಿಂದ ಹೊರಗಡೆ ಹೋಗಿದ್ದ. ತಲೆಮರೆಸಿಕೊಂಡಿದ್ದವನನ್ನು ಘಟನೆ ನಡೆದ 2 ದಿನಗಳ ಒಳಗಾಗಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಲತಂದೆ ಸಮಿತ್ ಮಾತಿಗೆ ಹೆಣ್ಣು ಮಕ್ಕಳು (Daughters) ವಿರೋಧ ವ್ಯಕ್ತಪಡಿಸುತ್ತಿದ್ದರು ಎಂಬ ಕೋಪಕ್ಕೆ ಹೆಣ್ಣುಮಕ್ಕಳಿಬ್ಬರನ್ನು ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯ ವೇಳೆ ಬಹಿರಂಗವಾಗಿದೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ: ಬಾಲಕೃಷ್ಣ, ಲೋಲ, ಮುರಳಿ ಕೊಳಲ ಲೀಲ- ಎಲ್ಲೆಲ್ಲೂ ಭಗವಾನ್ ಶ್ರೀಕೃಷ್ಣ ಜಪ
ಆರೋಪಿ ಸಮಿತ್ ಮಕ್ಕಳ ಮೇಲೆ ಸಾಕಷ್ಟು ಅನುಮಾನ ಪಡುತ್ತಿದ್ದ. ಮಗಳ ಸ್ನೇಹಿತ ಯಾರಾದರೂ ಮನೆಗೆ ಬಂದಿರಬಹುದು ಎಂಬ ಅನುಮಾನದ ಮೇಲೆ ಆರೋಪಿ ಸಮಿತ್ ಮನೆಗೆ ಬಂದಿದ್ದ. ಹತ್ಯೆಯ ದಿನ ಸಮಿತ್ ಸೃಷ್ಠಿ ಮತ್ತು ಸೋನಿಯಾಯರನ್ನು ಶಾಲೆಯಿಂದ ಕರೆದುಕೊಂಡು ಬಂದಿದ್ದ. ಶನಿವಾರವಾಗಿದ್ದರಿಂದ 12:30ರ ಸುಮಾರಿಗೆ ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದಿದ್ದ. ಮನೆಗೆ ಬಂದ ತಕ್ಷಣ ಮಗಳು ರೂಂ ಸೇರಿಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಿರುತ್ತಾಳೆ. ಮಗಳ ರೂಂ ಬಳಿ ಬಂದು ನಿಂತುಕೊಂಡು ಮಗಳು ಮೊಬೈಲ್‌ನಲ್ಲಿ ಮಾತನಾಡುತಿದ್ದುದ್ದನ್ನು ಸಮಿತ್ ಕೇಳಿಸಿಕೊಂಡಿದ್ದಾನೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ 2024: ಕೃಷ್ಣ ಜನ್ಮಭೂಮಿ ಮಥುರಾ ಅಂಗಳದ ಪ್ರಮುಖ ಕೃಷ್ಣ ಮಂದಿರಗಳು
ಬಳಿಕ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅನುಮಾನ ಪಟ್ಟು ಸಮಿತ್ ಮನೆಗೆ ಬಂದಿದ್ದ. ಮಗಳು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವಿಷಯ ಕೇಳುವುದಕ್ಕೆ ಮುಂದಾಗುತ್ತಿದ್ದಂತೆ ಮಗಳು ಮೊಬೈಲ್ ಅನ್ನು ದಿಂಬಿನ ಕೆಳಗೆ ಮುಚ್ಚಿಟ್ಟಿದ್ದಾಳೆ. ಆರೋಪಿಗೆ ಅನುಮಾನ ಹೆಚ್ಚಾಗಿ ಮೊಬೈಲ್ ಪತ್ತೆ ಮಾಡಿ ಪರಿಶೀಲಿಸಿದ್ದಾನೆ. ಮೊಬೈಲ್ ನೋಡಿ ಮುಗಿಸುತ್ತಿದ್ದಂತೆ ಮಚ್ಚಿನಿಂದ ಹೊಡೆದು ಒಬ್ಬಳನ್ನು ಕೊಲೆ ಮಾಡಿದ್ದಾನೆ. ವಾಶ್ ರೂಂನಲ್ಲಿದ್ದ ಚಿಕ್ಕ ಮಗಳು ಹೊರಗಡೆ ಬಂದ ಕೂಡಲೇ ಅಕ್ಕನ ಬಗ್ಗೆ ಹೇಳಿದ್ದಾನೆ. ನಿನ್ನ ಅಕ್ಕ ಹೀಗೆ ಮಾಡುತ್ತಾಳೆ ನೋಡು ಎಂದು ಹೇಳಿ ಊಟ ಹಾಕಿಕೊಂಡು ಬರಲು ಹೇಳಿದ್ದಾನೆ. ಊಟ ಹಾಕಿಕೊಂಡು ಬರುವುದಕ್ಕೆ ಹೇಳಿ ಚಿಕ್ಕ ಹುಡುಗಿಯನ್ನು ಕೂಡ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆ ಬಗ್ಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: MUDA Scam | ರಾಜ್ಯಪಾಲರ ನಡೆಗೆ ಖಂಡನೆ – ಸಿದ್ದರಾಮಯ್ಯ ಬೆನ್ನಿಗೆ ನಿಂತ ಮಠಾಧೀಶರು