ಹೈದರಾಬಾದ್: ಅಂಗಡಿ ಮಾಲೀಕನೊಬ್ಬನ ಹತ್ಯೆಗೈದ ಆರೋಪದ ಮೇಲೆ ಹೈದರಾಬಾದ್ ಪೊಲೀಸರು 18 ಜನರನ್ನು ಬಂಧಿಸಿದ್ದಾರೆ.
ಹೈದರಾಬಾದ್‌ನ ಎಲ್‌ಬಿ ನಗರದ ನಿವಾಸಿ ನರಸಿಂಹ ರೆಡ್ಡಿ(33) 2021ರ ಡಿಸೆಂಬರ್ 31ರಂದು ಹತ್ಯೆಯಾಗಿದ್ದು, ಈ ಪ್ರಕರಣದಲ್ಲಿ ಪೊಲೀಸರು ಒಟ್ಟು 21 ಮಂದಿಯ ಮೇಲೆ ಕೇಸ್ ದಾಖಲಿಸಿದ್ದಾರೆ. ಈಗಾಗಲೇ ಪೊಲೀಸರು 18 ಆರೋಪಿಗಳನ್ನು ಬಂಧಿಸಿದ್ದು, ಮೂವರು ಆರೋಪಿಗಳನ್ನು ಹುಡುಕುತ್ತಿದ್ದಾರೆ.
ನರಸಿಂಹ ರೆಡ್ಡಿ 2021ರ ಡಿಸೆಂಬರ್ 31ರಂದು ತನ್ನ ಹುಟ್ಟು ಹಬ್ಬವನ್ನು ಸ್ನೇಹಿತರೊಂದಿಗೆ ಆಚರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಲ್ಲೇ ಹೊಸ ವರ್ಷವನ್ನು ಆಚರಿಸಿಕೊಳ್ಳುತ್ತಿದ್ದ ಇನ್ನೊಂದು ಗುಂಪಿನೊಂದಿಗೆ ಜಗಳ ನಡೆದಿದೆ. ಪರಿಣಾಮ ನರಸಿಂಹ ರೆಡ್ಡಿ ಹತ್ಯೆಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಗರ್ಭಿಣಿ ಅಂತಾ ಸುಳ್ಳಿ ಹೇಳಿ ಮಗುವಿಗೆ ಜನ್ಮ ಕೊಟ್ಟಳು- ಆದರೆ ಕಂದಮ್ಮ ಇಲ್ಲ
ಮಲಿಕ್, ಮಿಟ್ಟು, ರಾಘವ ಎಂಬ ಮೂವರು ಆರೋಪಿಗಳು ಆರಂಭದಲ್ಲಿ ಜಗಳ ಪ್ರಾರಂಭಿಸಿ, ನಂತರ ತಮ್ಮ ಸಹಪಾಠಿಗಳನ್ನು ಕರೆಸಿಕೊಂಡಿದ್ದಾರೆ. ಕಾರು ಹಾಗೂ ಬೈಕ್‌ಗಳಲ್ಲಿ ಬಂದಿದ್ದ ಒಟ್ಟು 21 ಆರೋಪಿಗಳು ನರಸಿಂಹ ರೆಡ್ಡಿ ಗುಂಪಿನ ಮೇಲೆ ಕಲ್ಲು ಹಾಗೂ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಕಿರುಕುಳದಿಂದ ಬೇಸತ್ತು ಮಕ್ಕಳಿಂದ ಮರಳಿ ಆಸ್ತಿ ಪಡೆದುಕೊಳ್ಳುವಲ್ಲಿ ವೃದ್ಧ ತಾಯಿ ಯಶಸ್ವಿ!
ಎಲ್‌ಬಿ ನಗರ ಪೊಲೀಸರು 18 ಆರೋಪಿಗಳನ್ನು ಬಂಧಿಸಿ, ಮೂರು ಕಾರ್, ಬೈಕ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.