BidarCrimeDistrictsKarnatakaLatestMain Post

ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೀದರ್: ಸಹೋದರಿಯನ್ನು ಪ್ರೀತಿಸಿದ್ದಕ್ಕೆ ಸಹೋದರನೊಬ್ಬ ಯುವಕನಿಗೆ ಚಾಕುವಿನಿಂದ ಇರಿದು ಭೀಕರ ಹತ್ಯೆ ಮಾಡಿದ ಘಟನೆ ನಗರದ ಸಿಂಗಾರ್ ಬಾಗ್‍ನಲ್ಲಿ ನಡೆದಿದೆ.

ಅಮೀರ್ ಖಾನ್ (20) ಕೊಲೆಗೀಡಾದ ಯುವಕ. ಹುಡುಗಿಯ ಅಣ್ಣ ಜೀಷನ್ ಚಾಕುವಿನಿಂದ ಇರಿದು ಕೊಲೆ ಮಾಡಿದ ವ್ಯಕ್ತಿ. ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು ಸಿಸಿಟಿವಿ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಬಾಲಚಂದ್ರ ಜಾರಕಿಹೊಳಿ ಬದಲು ಆಪ್ತ ಕಾರ್ಯದರ್ಶಿಗಳಿಂದ ಕಾಮಗಾರಿ ಉದ್ಘಾಟನೆ : ಕಾಂಗ್ರೆಸ್

ಈಗಾಗಲೇ ಹುಡುಗಿಯ ಮದುವೆಯಾಗಿದ್ದರೂ ಪ್ರೀತಿ ಮಾಡುವಂತೆ ಯುವಕ ಪದೇ ಪದೇ ಪಿಡಿಸುತ್ತಿದ್ದ. ಇದರಿಂದ ರೋಸಿ ಹೋದ ಹುಡುಗಿ ಅಣ್ಣ ಚಾಕುವಿಂದ ಇರಿದು ಕೊಲೆ ಮಾಡಿದ್ದಾನೆ.  ಇದನ್ನೂ ಓದಿ: 132 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ ಉದ್ದೇಶಪೂರ್ವಕ – ಅಮೆರಿಕ ವರದಿ ಹೇಳಿದ್ದೇನು?

ಮಗನ ಕೊಲೆ ಕುರಿತು ತಾಯಿ ಶಾಯಿನ್ ಬೇಗಂ ನಗರದ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published.

Back to top button