ರಾಯಚೂರು: 1 ಸಾವಿರ ರೂ. ಸಾಲ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯನ್ನು ಕೊಲೆಗೈದಿರುವ ಘಟನೆ ರಾಯಚೂರಿನ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಇದೀಗ ನ್ಯಾಯಾಲಯ ಅಪರಾಧಿಗೆ 7 ವರ್ಷ ಜೈಲು ಹಾಗೂ 1.20 ಲಕ್ಷ ದಂಡ ವಿಧಿಸಿ, ತೀರ್ಪು ಪ್ರಕಟಿಸಿದೆ.ಇದನ್ನೂ ಓದಿ: ಆಫ್ರಿಕಾ ವಿರುದ್ಧ 50 ರನ್‌ಗಳ ಭರ್ಜರಿ ಜಯ – ಭಾನುವಾರ ನ್ಯೂಜಿಲೆಂಡ್ Vs ಭಾರತ ಫೈನಲ್
ಕೊಲೆಪಾತಕಿಯನ್ನು ಪರಶುರಾಮ ಎಂದು ಗುರುತಿಸಲಾಗಿದ್ದು, ಶೇಖರ್ ಎಂಬಾತನನ್ನು 2020 ರಲ್ಲಿ ಕೊಲೆ ಮಾಡಿದ್ದ. ಪರಶುರಾಮ ಬಳಿ ಶೇಖರ್ 3 ಸಾವಿರ ರೂ. ಸಾಲ ಪಡೆದಿದ್ದ. 2 ಸಾವಿರ ರೂಪಾಯಿ ಸಾಲ ಮರಳಿಸಿ, ಒಂದು ಸಾವಿರ ರೂಪಾಯಿ ಬಾಕಿ ಉಳಿಸಿಕೊಂಡಿದ್ದ. ಶೇಖರ್ ಆ 1 ಸಾವಿರ ರೂ.ಯನ್ನು ಕೊಡುವಂತೆ ಪದೇ ಪದೇ ಕೇಳುತ್ತಿದ್ದ. ಇದರಿಂದ ಸಿಟ್ಟುಗೊಂಡಿದ್ದ ಪರಶುರಾಮ, ಶೇಖರ್ ಮನೆಗೆ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಬ್ಬಿಣದ ಪಟ್ಟಿಯಿಂದ ಹೊಡೆದಿದ್ದ. ಪರಿಣಾಮ ಗಂಭೀರವಾಗಿ ಗಾಯಗೊಂಡ ಶೇಖರ್ ಸಾವನ್ನಪ್ಪಿದ್ದ. ಹೀಗಾಗಿ ಪರಶುರಾಮ ವಿರುದ್ಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು.
2020ರಲ್ಲಿ ನಡೆದಿದ್ದ ಈ ಕೊಲೆ ಪ್ರಕರಣದ ತೀರ್ಪು ಇಂದು ಪ್ರಕಟವಾಗಿದ್ದು, ಪರಶುರಾಮನಿಗೆ 7 ವರ್ಷ ಜೈಲು ಹಾಗೂ 1 ಲಕ್ಷ 30 ಸಾವಿರ ರೂ. ದಂಡ ವಿಧಿಸಿ ರಾಯಚೂರಿನ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.ಇದನ್ನೂ ಓದಿ: ಟೆಕ್ಕಿಗಳೇ ಗಮನಿಸಿ, ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್‌ನಲ್ಲಿ ರಾತ್ರಿ ಸಂಚಾರ ಬಂದ್!