ಕನ್ನಡ ಸಿನಿಮಾ ರಂಗದ ನಿರ್ದೇಶಕ, ನಿರ್ಮಾಪಕ ಕೆ.ಆರ್. ಮುರಳಿ ಕೃಷ್ಣ ನಿಧನರಾಗಿದ್ದಾರೆ. 63 ವಯಸ್ಸಿನ ಇವರು ಬ್ರೈನ್ ಟೂಮರ್ ನಿಂದ ಬಳಲುತ್ತಿದ್ದರು. ಸಣ್ಣ ಸತ್ಯ, ಗರ ಸೇರಿದಂತೆ ಹಲವು ಚಿತ್ರಗಳನ್ನು ಇವರು ನಿರ್ದೇಶನ ಮಾಡಿದ್ದಾರೆ. ಗರ ಸಿನಿಮಾದ ಮೂಲಕ ಬಾಲಿವುಡ್ ನ ಖ್ಯಾತ ಹಾಸ್ಯ ಕಲಾವಿದ ಜಾನಿ ಲಿವರ್ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ್ದರು. ಈ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ.
Advertisement
ಬ್ರೈನ್ ಟೂಮರ್ ಇರುವುದು ತಡವಾಗಿ ಪತ್ತೆ ಆಗಿದ್ದರಿಂದ, ಶಸ್ತ್ರ ಚಿಕಿತ್ಸೆಗಾಗಿ ಕೂಡಲೇ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರ ಚಿಕಿತ್ಸೆ ಫಲಕಾರಿಯಾದರೂ, ಹೃದಯಾಘಾತ ಕಾರಣದಿಂದಾಗಿ ಅವರು ನಿನ್ನ ಸಂಜೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿದ್ದರೂ, ಪ್ರವೃತ್ತಿಯಲ್ಲಿ ಸಿನಿಮಾ ನಿರ್ದೇಶಕರಾಗಿ, ನಿರ್ಮಾಪಕರಾಗಿ ಸಿನಿಮಾ ರಂಗಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಬಾಳನೌಕೆ, ಕರ್ಣನ ಸಂಪತ್ತು, ಹೃದಯ ಸಾಮ್ರಾಜ್ಯ, ಮರಳಿ ಗೂಡಿಗೆ ಸಿನಿಮಾಗಳನ್ನ ನಿರ್ಮಿಸಿದ್ದರು
Advertisement
Advertisement
ಬೆಂಗಳೂರಿನ ಸಹಕಾರ ನಗರದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದು, 12.30ಕ್ಕೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು, ಪತ್ನಿಯನ್ನ ಇವರು ಅಗಲಿದ್ದಾರೆ.