ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (D K Shivakumar) ಅವರು ಸಿದ್ದರಾಮಯ್ಯ (Siddaramaiah) ಮತ್ತು ಕಾಂಗ್ರೆಸ್ ಅನ್ನು ಹೆದರಿಸಲು ಹಿಂದುತ್ವದ ವೇಷ ಹಾಕಿದ್ದಾರೆ ಎಂದು ಆರ್.ಆರ್ ನಗರ ಶಾಸಕ ಮುನಿರತ್ನ (Munirathna) ವಾಗ್ದಾಳಿ ನಡೆಸಿದರು.
ಸಿಎಂ ಭೇಟಿ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಹಿಂದೂ ಅಲ್ಲ ಅಂತ ನಾವು ಯಾರು ಹೇಳಿಲ್ಲ. ಅವರು ಹಿಂದೂನೇ. ಹಿಂದು ಆಗಿಯೇ ಸಾಯಲಿ ಯಾರು ಬೇಡ ಅಂದರು. ಡಿಕೆಶಿ ಅವರು ಸಿದ್ದರಾಮಯ್ಯಗೆ ಬ್ಲಾಕ್‌ಮೇಲ್ ಮಾಡೋದಕ್ಕೆ ಹಿಂದುತ್ವದ ವೇಷ ಹಾಕಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರಾರ್ಥನೆ ನಡೆಸುತ್ತಿದ್ದಾಗಲೇ ಪಾಕ್ ಮಸೀದಿಯಲ್ಲಿ ಬಾಂಬ್ ಸ್ಫೋಟ – 5 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ
Advertisement
ಸಿದ್ದರಾಮಯ್ಯರನ್ನ ಮತ್ತು ಕಾಂಗ್ರೆಸ್ ಅನ್ನ ಬ್ಲ್ಯಾಕ್‌ಮೇಲ್ ಮಾಡಲು ಇವೆಲ್ಲಾ ತಂತ್ರ ಅಷ್ಟೇ. ಸದ್ಗುರು ಅವರು ಇವರನ್ನು ಆಹ್ವಾನ ಮಾಡೋಕೆ ಬಂದಿರೋದಿಲ್ಲ. ಇವರೇ ಪ್ಲ್ಯಾನ್ ಮಾಡಿ ಅವರನ್ನ ಕರೆಸಿಕೊಂಡು ಆಹ್ವಾನ ಬಂದಿದೆ ಅಂತ ಪತ್ರಿಕೆ ಹಿಡಿದುಕೊಂಡು ಹೋಗಿದ್ದಾರೆ. ಡಿಕೆಶಿ ಬಿಜೆಪಿಗೆ ಬರೋ ಪ್ರಶ್ನೆಯೇ ಇಲ್ಲ. ಇವರು ಸಿಎಂ ಅನ್ನು ಹೆದರಿಸಲು ಬಜೆಪಿಯ ಕಥೆ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಟ್ಯಾಟೂಗೆ 22 ಹೆವಿ ಮೆಟಲ್ ಬಳಕೆಯಿಂದ ಚರ್ಮರೋಗ: ದಿನೇಶ್ ಗುಂಡೂರಾವ್
Advertisement
Advertisement
ಡಿಕೆಶಿ ಬಿಜೆಪಿಗೆ ಬಂದರೆ ಕುಕ್ಕರ್‌ನಲ್ಲಿ ಬಾಂಬ್ ಇಟ್ಟ ಬ್ರದರ್ಸ್ ಆ್ಯಂಡ್ ಸಿಸ್ಟರ್‌ಗೆ ಕೋಪ ಬರುವುದಿಲ್ವಾ? ಏಸು ಬೆಟ್ಟದವರು ಕೋಪ ಮಾಡಿಕೊಳ್ಳುತ್ತಾರೆ. ಇವರು ಹೀಗೆ ಮಾಡಿದರೆ ಏಕನಾಥ್ ಶಿಂಧೆ ಆಗುವುದಿಲ್ಲ. ಏಕ ವ್ಯಕ್ತಿ ಆಗುತ್ತಾರೆ. ಬೆಂಗಳೂರನ್ನ ಡಿಕೆಶಿ ಹಾಳು ಮಾಡಿ ಇಟ್ಟಿದ್ದಾರೆ. ಬೆಂಗಳೂರು ಬಗ್ಗೆ ಡಿಕೆಶಿಗೆ ಗೊತ್ತೇ ಇಲ್ಲ. ಬೆಂಗಳೂರು ಹೀಗೆ ಹೋದರೆ ಐಟಿ-ಬಿಟಿ, ಸಿಲಿಕಾನ್ ಸಿಟಿ ಎನ್ನುವ ಹೆಸರು ಹೋಗುತ್ತದೆ ಎಂದು ಗುಡುಗಿದರು. ಇದನ್ನೂ ಓದಿ: ಎರಡು ಬಿಎಂಟಿಸಿ ಬಸ್‌ಗಳಿಗೆ ಸಿಲುಕಿ ಅಪ್ಪಚ್ಚಿಯಾದ ಆಟೋ – ಚಾಲಕ ಸೇರಿ ಇಬ್ಬರು ಬಲಿ