ಧರ್ಮಸ್ಥಳದ ಮಂಜುನಾಥನಂತೆ ಡಾ.ಮಂಜುನಾಥ್ – ಗುಣಗಾನ ಮಾಡಿದ ಮುನಿರತ್ನ

Public TV
2 Min Read
CN Manjunatj

– ವೋಟ್‌ ಹಾಕಿ ಋಣ ತೀರಿಸಿಕೊಳ್ಳಿ ಎಂದ ಮಾಜಿ ಸಚಿವ

ರಾಮನಗರ: ಧರ್ಮಸ್ಥಳದ ಮಂಜುನಾಥ ನಂತೆ ನಮ್ಮ ಡಾ. ಸಿಎನ್‌ ಮಂಜುನಾಥ್ (CN Manjunat) ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಮಾಡಿದ ತಪ್ಪಿಗೆ ಈ ಬಾರಿ ಮಂಜುನಾಥ್‌ ಅವರಿಗೆ ವೋಟ್‌ ಹಾಕಿ ಋಣ ತೀರಿಸಿಕೊಳ್ಳಿ ಎಂದು ಮುನಿರತ್ನ (Munirathna) ಹೇಳಿದ್ದಾರೆ.

Ramanagara

ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್‌ ಮಂಜುನಾಥ್ ನಾಮಪತ್ರ ಸಲ್ಲಿಕೆ ಹಿನ್ನೆಲೆ ಮೈತ್ರಿ ಅಭ್ಯರ್ಥಿ ಪರ ಬೃಹತ್ ಸಮಾವೇಶದಲ್ಲಿ ಶಾಸಕ ಮುನಿರತ್ನ ಅಬ್ಬರದ ಭಾಷಣ ಮಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಗ್ದ ಯುವಕನನ್ನ 5 ಸಾವಿರದ ಗಿಫ್ಟ್ ಕಾರ್ಡ್ ಕೊಟ್ಟು ಸೋಲಿಸಿದರು. ಆ ದೇವರು ನಿಮ್ಮನ್ನ ಕ್ಷಮಿಸಲ್ಲ. ಆ ಪಾಪಕ್ಕೆ ಪ್ರಾಯಶ್ಚಿತ್ತ ಆಗಬೇಕು ಅಂದ್ರೆ ಮಂಜುನಾಥ್‌ ಅವರನ್ನ ಗೆಲ್ಲಿಸಬೇಕು ಅಂತಾ ಜನತೆಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ನಾನೇನು ತಪ್ಪು ಮಾಡಿಲ್ಲ, 10 ತಿಂಗ್ಳು ಅಜ್ಞಾತವಾಸ ಅನುಭವಿಸಿದ್ದೇನೆ: ಸುಧಾಕರ್ ಕಣ್ಣೀರು

ಡಾ.ಮಂಜುನಾಥ್ ಅವರು 75 ಲಕ್ಷ ಆಪರೇಷನ್ ಮಾಡಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಇವರ ಸ್ಪರ್ಧೆಯಿಂದ ಇಲ್ಲಿ ಅಣ್ಣತಮ್ಮಂದಿರ ಹೃದಯ ಬಡಿತ ಜಾಸ್ತಿ ಆಗಿದೆ. ಹೆಂಗೋ ಕುಕ್ಕರು, ತವ ಕೊಟ್ಟು ಗೆಲ್ತಿದ್ವಿ, ಈಗ ಡಾಕ್ಟರ್‌ ವಕ್ಕರಿಸಕೊಂಡ್ರು ಅಂತ ಟೆನ್ಷನ್ ಮಾಡಿಕೊಂಡಿದ್ದಾರೆ. ಧರ್ಮಸ್ಥಳದ ಮಂಜುನಾಥ ನಂತೆ ನಮ್ಮ ಡಾ.ಮಂಜುನಾಥ್. 91 ವರ್ಷ ವಯಸ್ಸಿನ ದೇವೆಗೌಡರ ಮಾತುಕೇಳಿದ್ರೆ ಮೈ ರೋಮಾಂಚನ ಆಗುತ್ತೆ. ಸಿದ್ದರಾಮಯ್ಯಗೆ (Siddaramaiah) ಜನತಾದಳ ಇರೋದನ್ನ ತೋರಿಸುತ್ತೇನೆ ಅಂತಾ ಎಚ್ಚರಿಸುತ್ತಾರೆ. ಅದಕ್ಕೆ ಕಾರಣ ರಾಮನಗರದ ಜನ. ಮಂಜುನಾಥ್‌ರಿಗೆ ವೋಟ್‌ ಮಾಡಿದ್ರೆ ದೇವಾನು ದೇವತೆಗಳು ತಥಾಸ್ತು ಅಂತಾರೆ. ಅವರಿಗೆ ವೋಟ್‌ ಹಾಕದಿದ್ದರೆ ಯಮ ನರಕಕ್ಕೆ ಕಳುಹಿಸ್ತಾನೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಉಡೀಸ್‌ -‌ ಬರೋಬ್ಬರಿ 35 ಕೋಟಿ ಮಂದಿ ವೀಕ್ಷಣೆ!

ಒಂದೇ ಒಂದು ಕಪ್ಪುಚುಕ್ಕೆ ಇಲ್ಲದ ಏಕೈಕ ಅಭ್ಯರ್ಥಿ ಡಾ. ಮಂಜುನಾಥ್‌, ಅವರ ಮೇಲೆ ಒಂದೇ ಒಂದು ಆರೋಪ ಇಲ್ಲ. ಅವರೂ ಸಹ ಒಂದು ದಿನ ದೇವೆಗೌಡರು, ಕುಮಾರಸ್ವಾಮಿ ಹೆಸರು ಹೇಳಿಲ್ಲ. ದೇವರು ಇಲ್ಲಿ ಪ್ರತ್ಯಕ್ಷ ಆಗಿ ನನಗೆ ವರ ನೀಡಿದ್ರೆ ನನ್ನ ಆಯಸ್ಸನ್ನೂ ಮಂಜುನಾಥ್‌ರಿಗೆ ಕೊಡು ಅಂತೀನಿ. ಕೆಲಸ ಮಾಡಿ ಇಲ್ಲಿ ಕೂಲಿ ಕೊಡಿ ಅಂತಾರೆ. ಆದ್ರೆ ಇಲ್ಲಿ ಕುಕ್ಕರ್, ಸೀರೆ ಕೊಟ್ಟು ಕೂಲಿ ಕೇಳ್ತಿದ್ದಾರೆ. 10 ವರ್ಷದ ಕೊಡುಗೆಗಳ ಪಟ್ಟಿ ಬಿಡುಗಡೆ ಮಾಡಲಿ. ಕೊವೀಡ್ ಟೈಂ ನಲ್ಲಿ ಹೋಗಿ ನಾನೇ ಹೆಣ ಮಣ್ಣು ಮಾಡಿದೆ ಅಂತಾರೆ, ಮಾಡಿದ್ರೆ ತೆಗಿಸಿ ನೋಡೋಣ. ಕೊವೀಡ್ ಸಮಯದಲ್ಲಿ ಏನಾದ್ರು ಕೊಟ್ಟಿದ್ರೆ ದಾಖಲೆ ಕೊಡಲಿ. ಈ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಮಂಜುನಾಥ್ ಗೆದ್ದಾಗಿದೆ ಚುನಾವಣಾ ಅಷ್ಟೆ ಬಾಕಿ ಇರೋದು ಎಂದು ಬೀಗಿದ್ದಾರೆ.

ಮೋದಿ, ‌ಅಮಿತ್ ಶಾ ಅವರ ಮೆದಳು ಸ್ಯಾಟಲೈಟ್‌ ತರ, ಅದು ನಿಂತರೂ ಅವರ ಮೆದುಳು ನಿಲ್ಲಲ್ಲ. ಡಾ.ಮಂಜುನಾಥ್ ರನ್ನ ಗುರುತಿಸಿದ್ದು ಮೋದಿ, ಅಮಿತ್ ಶಾ. ನಾವ್ಯಾರು ಅಲ್ಲ. ಅವರ ಸೇವೆ ಮೆಚ್ಚಿ, ದೇಶಕ್ಕೆ ಅಗತ್ಯ ಅಂತ ಕರೆದಿದ್ದು. ನಿಖಿಲ್ ಅವರಿಗೆ ಮಾಡಿದ ತಪ್ಪಿಗೆ ಮಂಜುನಾಥ್‌ಗೆ ವೋಟ್ ಹಾಕಿ ಋಣ ತೀರಿಸಿಕೊಳ್ಳಿ ಎಂದು ಮುನಿರತ್ನ ಕರೆ ನೀಡಿದ್ದಾರೆ. ಇದನ್ನೂ ಓದಿ: ಗಿಫ್ಟ್ ಕಾರ್ಡ್ ಹಂಚಿ ನನಗೆ ಅನ್ಯಾಯ ಮಾಡಿದ್ರು: ಸೋಲಿನ ಬಗ್ಗೆ ನಿಖಿಲ್ ಭಾವುಕ

Share This Article