ಗದಗ: ಬರದ ನಾಡಿನಲ್ಲಿ ತಹಶೀಲ್ದಾರ್ (Tehsildar) ಭರ್ಜರಿ ಹುಟ್ಟುಹಬ್ಬ (Birthday) ಆಚರಿಸಿಕೊಂಡು ಪೇಚಿಗೆ ಸಿಲುಕಿದ ಘಟನೆ ಜಿಲ್ಲೆಯ ಮುಂಡರಗಿ (Mundaragi) ಪಟ್ಟಣದಲ್ಲಿ ನಡೆದಿದೆ.
ಮುಂಡರಗಿ ತಹಶೀಲ್ದಾರ್ ಧನಂಜಯ್ ಮಾಲಗಿತ್ತಿ ಗುರುವಾರ ರಾತ್ರಿ ಭರ್ಜರಿ ಬರ್ತ್‌ಡೇ ಆಚರಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಕಚೇರಿ ಒಳಗಡೆ ಹಾಗೂ ತಹಶೀಲ್ದಾರ್ ಕ್ವಾಟರ್ಸ್ ಆವರಣದಲ್ಲಿ ಬರ್ತ್‌ಡೇ ಸಂಭ್ರಮ ನಡೆದಿದೆ.
ಜಿಲ್ಲೆಯಲ್ಲಿ ಬರಗಾಲ (Drought) ತಾಂಡವವಾಡುತ್ತಿದ್ದು, ಜನ ಗುಳೆ ಹೋಗುತ್ತಿದ್ದಾರೆ. ಪರಿಹಾರವಿಲ್ಲದೆ ರೈತರು ಜಾನುವಾರುಗಳೊಂದಿಗೆ ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರ ಬೆನ್ನೆಲುಬಾಗಿ ನಿಲ್ಲಬೇಕಾದ ತಹಶೀಲ್ದಾರ್ ಧನಂಜಯ್ 48ನೇ ವರ್ಷದ ಬರ್ತ್‌ಡೇಯನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಇದನ್ನೂ ಓದಿ: ಸುಮಲತಾ ಬೆಂಗಳೂರು ಉತ್ತರಕ್ಕೆ ಬಂದ್ರೆ ಸ್ವಾಗತ- ಸದಾನಂದಗೌಡ
ಮಹಾರಾಜ ಕುರ್ಚಿಯಲ್ಲಿ ಸೂಟು-ಬೂಟು ಹಾಕಿಕೊಂಡು ಫುಲ್ ಮಿಂಚಿದ್ದು, ಕೆಂಪು, ಹಳದಿ ಬಣ್ಣದ ಬಲೂನ್‌ಗಳಿಂದ ತುಂಬಿದ ವೇದಿಕೆ ಅಲಂಕಾರ, ವೇದಿಕೆ ಸುತ್ತ ಮುತ್ತ ಕಲರ್ ಫುಲ್ ಲೈಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಇಲಾಖೆ ಅಧಿಕಾರಿಗಳು ಸೇರಿ ನೂರಾರು ಜನರು ಭಾಗಿಯಾಗಿದ್ದರು.
ಕ್ಷೇತ್ರದ ಜನರು ಸಂಕಷ್ಟದ ಸ್ಥಿತಿಯಲ್ಲಿದ್ದಾಗ ತಹಶೀಲ್ದಾರ್ ಧನಂಜಯ್ ಅದ್ದೂರಿ ಬರ್ತ್‌ಡೇ ಆಚರಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಹಶೀಲ್ದಾರ್ ಅದ್ದೂರಿ ಬರ್ತ್‌ಡೇ ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ವಿಷಯ ಮಾಧ್ಯಮಗಳಿಗೆ ತಿಳಿಯುತ್ತಿದ್ದಂತೆ ತಮ್ಮ ಫೋನ್ ಅನ್ನು ಸ್ವಿಚ್‌ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಮೋದಿ ಲಕ್ಷ ರೂಪಾಯಿ ಸೂಟ್ ಧರಿಸ್ತಾರೆ.. ಆದ್ರೆ ನಾನು ಬಿಳಿ ಟೀ-ಶರ್ಟ್ ಮಾತ್ರ ಧರಿಸುತ್ತೇನೆ: ರಾಹುಲ್ ಗಾಂಧಿ