ಮುಂಬೈ: ರೈಲ್ವೆ ನಿಲ್ದಾಣಗಳಲ್ಲಿ ಟ್ರ್ಯಾಕ್ ಮೇಲೆ ಬಿದ್ದು ಹಲವರು ಪ್ರಾಣ ಕಳೆದುಕೊಂಡಿರೋ ಸಾಕಷ್ಟು ಘಟನೆಗಳಿವೆ. ಹಾಗೇ ಅಚ್ಚರಿಯ ರೀತಿಯಲ್ಲಿ ಪಾರಾದವರು ಇದ್ದಾರೆ. ಆದ್ರೆ ರೈಲು ಇನ್ನೇನು ನಿಲ್ದಾಣ ತಲುಪಿತು ಎನ್ನುವ ವೇಳೆಗೆ ಮಹಿಳೆಯೊಬ್ಬರು ರೈಲ್ವೆ ಟ್ರ್ಯಾಕ್ ಮೇಲೆ ಜಿಗಿದಿದ್ದು, ರೈಲು ಮುಂದೆ ಸಾಗಿದ ಬಳಿಕ ನೋಡಿದ್ರೆ ಆಕೆ ನಾಪತ್ತೆಯಾಗಿದ್ದ ವಿಡಿಯೋವೊಂದು ಹರಿದಾಡ್ತಿದೆ.
Advertisement
ಜೂನ್ 23ರಂದು ಘಾಟ್ಕೋಪರ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ರೈಲು ನಿಲ್ದಾಣಕ್ಕೆ ಸಮೀಪಿಸುತ್ತಿದ್ದಂತೆ, ಜನ ನೋಡನೋಡುತ್ತಿದ್ದಂತೆ ಮಹಿಳೆ ರೈಲ್ವೆ ಟ್ರ್ಯಾಕ್ ಮೇಲೆ ಜಿಗಿದಿದ್ದಾರೆ. ರೈಲು ಕೂಡ ಮುಂದೆ ಬಂದಿದೆ. ಆದ್ರೆ ನಿಲ್ದಾಣದಿಂದ ರೈಲು ಹೊರಟಮೇಲೆ ಜನ ಗಾಬರಿಯಿಂದ ಇಣುಕಿ ನೋಡಿದ್ರೆ ಮಹಿಳೆ ಟ್ರ್ಯಾಕ್ ಮೇಲೆ ಇರಲಿಲ್ಲ.
Advertisement
Advertisement
ನಿಲ್ದಾಣದಲ್ಲಿದ್ದ ಪ್ರಯಾಣಿಕರು ಇದರಿಂದ ಶಾಕ್ ಆಗಿದ್ರು. ಆ ಮಹಿಳೆ ಸಾವನ್ನಪ್ಪಿದ್ರಾ? ಬದುಕಿದ್ರಾ? ಬದುಕುಳಿದಿದ್ದರೆ ಎಲ್ಲಿ ಹೋದ್ರು? ಎಂಬೆಲ್ಲಾ ಪ್ರಶ್ನೆಗಳಿಂದ ಗೊಂದಲಕ್ಕೀಡಾಗಿದ್ರು. ಆದ್ರೆ ಮಹಿಳೆ ಎಲ್ಲಿ ಹೋದ್ರು ಅನ್ನೋದಕ್ಕೆ ಸಿಸಿಟಿವಿ ದೃಶ್ಯಾವಳಿ ಉತ್ತರ ನೀಡಿದೆ.
Advertisement
ಮಹಿಳೆ ಟ್ರ್ಯಾಕ್ ಮೇಲೆ ಬಿದ್ದ ಕೆಲವು ನಿಮಿಷಗಳ ನಂತರ ಆಕೆ ನಿಲ್ದಾಣದಿಂದ ಹೊರಗೆ ಹೋಗೋದನ್ನ ಸಿಸಿಟಿವಿಯಲ್ಲಿ ನೋಡಬಹುದು. ಸಿಸಿಟಿವಿ ದೃಶ್ಯಾವಳಿಯನ್ನ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಹಿಳೆ ರೈಲಿನ ಮುಂದೆ ಜಿಗಿದಾಗ ಆಕೆ ಟ್ರ್ಯಾಕ್ ಮೇಲೆ ಅಂಗಾತ ಬಿದ್ದಿದ್ದನ್ನು ಕಾಣಬಹುದು. ಹೀಗಾಗಿ ಆಕೆ ಸತ್ತಿರಲಿಲ್ಲ. ರೈಲು ನಿಂತ ಬಳಿಕ ಆಕೆ ಕೆಳಗಿನಿಂದಲೇ ಹೊರಬಂದಿದ್ದು ಪಕ್ಕದ ಪ್ಲಾಟ್‍ಫಾರ್ಮ್‍ನಿಂದ ಹೊರಗೆ ಹೋಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಮಹಿಳೆ ನಿಲ್ದಾಣದಿಂದ ಹೊರನಡೆಯೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆಕೆ ಬದುಕುಳಿದ ಬಗ್ಗೆ ಸ್ಪಷ್ಟವಾಗಿದೆ.
ಈ ಹಿಂದೆ ಯುವತಿಯೊಬ್ಬಳು ಇಯರ್ ಫೋನ್ ಧರಿಸಿ ರೈಲ್ವೆ ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗಿದ್ದು, ರೈಲು ಆಕೆಗೆ ಗುದ್ದಿದರೂ ಅಚ್ಚರಿಯ ರೀತಿಯಲ್ಲಿ ಬದುಕುಳಿದ ಬಗ್ಗೆ ವರದಿಯಾಗಿತ್ತು. ಅದರ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು.
https://www.youtube.com/watch?v=ugTHkuBilsg
ಇದನ್ನೂ ಓದಿ :ರೈಲು ಹರಿದರೂ ಬದುಕುಳಿದ 19 ವರ್ಷದ ಯುವತಿ-ಮೈ ಜುಮ್ಮೆನಿಸುವ ವಿಡಿಯೋ ನೋಡಿ