ಮುಂಬೈ: ಬಾಲಿವುಡ್‍ನ ಹಾಟ್ ಸುಂದರಿ ಮಂಗಳೂರಿನ ಮಗಳು ಶಿಲ್ಪಾ ಶೆಟ್ಟಿ ಚಪ್ಪಲಿಯನ್ನು ಚಪ್ಪರಿಸಿ ತಿಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಆರೇ ಶಿಲ್ಪಗೇ ಚಪ್ಪಲಿಯನ್ನು ತಿನ್ನುವಂತಹದ್ದು ಏನ್ ಆಗಿದೆ ಅಂತೀದಿದ್ದರಾ? ಶಿಲ್ಪ ತಿಂದಿರುವುದು ಚಪ್ಪಲಿಯನ್ನಲ್ಲ ಬದಲಿಗೆ ಚಪ್ಪಲಿ ಆಕಾರದಲ್ಲಿರುವ ಚಾಕಲೇಟ್ ಕೇಕ್ ಅನ್ನು ಸವಿದಿದ್ದಾರೆ. ಅವರು ಚಪ್ಪಲಿ ರೀತಿಯಲ್ಲಿರುವ ಚಾಕಲೇಟ್ ಕೇಕ್ ಅನ್ನು ತಿನ್ನುತಿರುವ ವಿಡಿಯೋವನ್ನು ಸ್ವತಃ ಅವರೇ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
https://www.instagram.com/p/B8D3RUDBZ-A/
ಯೋಗ ಮತ್ತು ಡಯೇಟ್ ಮಾಡಿ ಫಿಟ್ ಅಂಡ್ ಫೈನ್ ಆಗಿರುವ ಶಿಲ್ಪಾ ಅವರು ಚೆನ್ನಾಗಿ ತಿನ್ನುತ್ತಾರೆ. ಹಾಗಾಗಿ ಭಾನುವಾರ ವೀಕೆಂಡ್ ಎಂಜಾಯ್ ಮಾಡಿರುವ ಶಿಲ್ಪಾ ಶೆಟ್ಟಿ ಅವರು, ಚಪ್ಪಲಿ ರೀತಿಯಲ್ಲಿ ತಯಾರಾದ ಚಾಕಲೇಟ್ ಕೇಕ್ ಅನ್ನು ತಿಂದು ಅದನ್ನು ವಿಡಿಯೋ ಮಾಡಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಚಪ್ಪಲಿಯನ್ನು ತಿನ್ನುತ್ತೀರಾ? “ವಿಶೇಷ ಭಾನುವಾರ ವಿಶಿಷ್ಟ ಅಕಾರದ ಚಾಕಲೇಟ್ ಕೇಕ್‍ನೊಂದಿಗೆ” ಎಂದು ಬರೆದುಕೊಂಡಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ವಿಭಿನ್ನ ವಿಭಿನ್ನ ರೀತಿಯ ಚಾಕಲೇಟ್ ಕೇಕ್. ಆದರೆ ಇದು ಚಪ್ಪಲಿ ಆಕಾರದಲ್ಲಿರುವ ಚಾಕಲೇಟ್. ಇದಕ್ಕೆ ನಾನು ಚಪ್ಪಲಿಯನ್ನು ತಿನ್ನುತ್ತೀರಾ ಎಂದು ಪ್ರಶ್ನಿಸಿದ್ದೆ. ಇದನ್ನು ನಾವು ತಿನ್ನಬಹುದು. ತಿಂದು ನನಗೆ ಇಷ್ಟವಾಯಿತು ಎಂದು ಹೇಳಿ ಸಂಡೇ ಬೆಂಜ್ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಕಳೆದ ತಿಂಗಳ 30 ರಂದು ತನ್ನ ಹುಟ್ಟೂರಿಗೆ ಬಂದಿದ್ದ ಶಿಲ್ಪಾ ಶೆಟ್ಟಿ ಅವರು, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾಗಿ ದೇವಿಯ ದರ್ಶನ ಪಡೆದಿದ್ದರು. ಈ ವೇಳೆ ಮಾತನಾಡಿದ್ದ ಅವರು, ಕ್ಷೇತ್ರಕ್ಕೆ ಬರಬೇಕು ಎಂದು ತುಂಬಾ ಆಸೆ ಇತ್ತು. ಕಟೀಲು ದೇವರ ಅನುಗ್ರಹದಿಂದ ನಾನು ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಯಿತು. ಹಾಗಾಗಿ ಬ್ರಹ್ಮಕಲಶದ ಈ ಸಂದರ್ಭದಲ್ಲಿ ದೇವಿಗೆ ಪೂಜೆ ಸಲ್ಲಿಸಲು ಬಂದಿದ್ದೇನೆ ಎಂದು ತುಳುವಿನಲ್ಲಿ ಹೇಳಿದ್ದರು.
ಈ ವೇಳೆ ಕಟೀಲು ಕ್ಷೇತ್ರದ ವತಿಯಿಂದ ನಟಿ ಶಿಲ್ಪಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದಲ್ಲೇ ತನ್ನ ಮನೆಯಿರುವ ಶಿಲ್ಪಾ ಶೆಟ್ಟಿ ಅವರು ಕಟೀಲು ದುರ್ಗಾಪರಮೇಶ್ವರಿ ದೇವಿಯ ಪರಮ ಭಕ್ತೆಯಾಗಿದ್ದಾರೆ. ತನ್ನ ಹುಟ್ಟೂರಿಗೆ ಹಾಗೂ ಮಂಗಳೂರಿನ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬರುವಾಗ, ತಪ್ಪದೇ ಕಟೀಲು ಶ್ರೀ ದೇವಿಯ ದರ್ಶನ ಪಡೆಯುತ್ತಾರೆ. ಸದ್ಯ ಬಾಲಿವುಡ್‍ನಲ್ಲಿ ಬ್ಯುಸಿ ಇರುವ ಶಿಲ್ಪಾ ಎರಡು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶೆಟ್ಟಿ ನಟನೆಯ ನಿಕ್ಕಮ್ಮ ಮತ್ತು ಹಂಗಮಾ-2 ಸಿನಿಮಾಗಳು ಬಿಡುಗಡೆ ಸಿದ್ಧಗೊಳ್ಳುತ್ತಿವೆ.