ಮುಂಬೈ: ಬಾಲಿವುಡ್‌ನ ಹಿರಿಯ ನಟ ಮತ್ತು ಅಸನ್ಸೋಲ್ ಕ್ಷೇತ್ರದ ಲೋಕಸಭಾ ಸದಸ್ಯ ಶತ್ರುಘ್ನ ಸಿನ್ಹಾ (Shatrughan Sinha) ಅವರು ಮುಂಬೈನ ಕೋಕಿಲಾಬೆನ್ (Kokilaben) ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ಎರಡು ದಿನಗಳಿಂದ ವೈರಲ್ ಜ್ವರ ಮತ್ತು ಆಯಾಸದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿ ಪುತ್ರ ಲವ್ ಸಿನ್ಹಾ ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಸಂಸದ ಕೋಟ ಶ್ರೀನಿವಾಸ ಪೂಜಾರಿಗೆ ಮಾತೃವಿಯೋಗ
ಶತ್ರುಘ್ನ ಸಿನ್ಹಾ ಆಸ್ಪತ್ರೆಯಿಂದ ಯಾವಾಗ ಬಿಡುಗಡೆಯಾಗುತ್ತಾರೆ ಎಂಬುದರ ಕುರಿತು ಯಾವುದೇ ಮಾಹಿತಿಯಿಲ್ಲ. ಪ್ರಸ್ತುತ ನಟನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ವೈದ್ಯರ ನಿಗಾದಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿದೆ.
ಕೆಲ ತಿಂಗಳುಗಳಿಂದ ನಟ, ಚುನಾವಣಾ ಪ್ರಚಾರ ಮತ್ತು ಅವರ ಪುತ್ರಿಯ ಮದುವೆಯಿಂದಾಗಿ ಬ್ಯುಸಿಯಾಗಿದ್ದರು. ಜೂನ್ 23 ರಂದು ತಮ್ಮ ಮಗಳು ಮತ್ತು ನಟಿ ಸೋನಾಕ್ಷಿ ಸಿನ್ಹಾ ಹಾಗೂ ದೀರ್ಘಕಾಲದ ಗೆಳೆಯ ಜಹೀರ್ ಇಕ್ಬಾಲ್ ಮದುವೆ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಶತ್ರುಘ್ನ ಸಿನ್ಹಾ ಭಾಗಿಯಾಗಿದ್ದರು.