ಮುಂಬೈ: ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ವಾಟ್ಸಪ್ ಸಂಖ್ಯೆಗೆ 26/11 ರೀತಿಯ ಭಯೋತ್ಪಾದಕ ದಾಳಿಯ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಪಾಕಿಸ್ತಾನ ಮೂಲದ ಫೋನ್ ಸಂಖ್ಯೆಯಿಂದ ಬೆದರಿಕೆ ಸಂದೇಶ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement
ಭಾರತದಲ್ಲಿ 6 ಜನರು ಈ ದಾಳಿಯನ್ನು ಕಾರ್ಯಗತಗೊಳಿಸುತ್ತಾರೆ ಎಂದು ಹೇಳಲಾಗಿದೆ. ಸ್ಥಳವನ್ನು ಟ್ರ್ಯಾಕ್ ಮಾಡಿದಾಗ ಪಾಕಿಸ್ತಾನ ಲೊಕೇಶನ್ ಕಂಡುಬಂದಿದೆ. ಈಗಾಗಲೇ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದು, ಕೇಂದ್ರೀಯ ತನಿಖಾ ಏಜೆನ್ಸಿಗಳಿಗೂ ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: 3-4 ದಿನಗಳಲ್ಲಿ ಸಿಬಿಐ-ಇಡಿ ನನ್ನ ಬಂಧಿಸಬಹುದು, ಯಾವುದಕ್ಕೂ ಹೆದರಲ್ಲ: ಮನೀಶ್ ಸಿಸೋಡಿಯಾ
Advertisement
Advertisement
ಮಹಾರಾಷ್ಟ್ರದ ರಾಯಗಢ ಕರಾವಳಿ ಭಾಗದಲ್ಲಿ ಇತ್ತೀಚೆಗೆ ಪತ್ತೆಯಾದ ಬೋಟ್‌ನಲ್ಲಿ 3 AK-47 ರೈಫಲ್ ಹಾಗೂ ಸ್ಫೋಟಕ ವಸ್ತುಗಳು ಪತ್ತೆಯಾಗಿತ್ತು. ಈ ಬೆನ್ನಲ್ಲೇ ದಾಳಿ ಬೆದರಿಕೆ ಮಹತ್ವ ಪಡೆದುಕೊಂಡಿದೆ. ತಾಜ್‌ಹೋಟೆಲ್ ಮಾದರಿಯಲ್ಲೇ ಮತ್ತೊಂದು ದಾಳಿ ನಡೆಯುವ ಆತಂಕ ಸೃಷ್ಟಿಯಾಗಿದೆ.