ಮುಂಬೈ: ಬುಲ್ಲಿ ಬೈ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬೆಂಗಳೂರಿನ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬುಲ್ಲಿ ಬೈ ಹೆಸರಿನಲ್ಲಿದ್ದ ಆ್ಯಪ್ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿ, ಅವರನ್ನು ಅಶ್ಲೀಲವಾಗಿ ಚಿತ್ರಿಸಿ ಹರಾಜು ಹಾಕಲಾಗುತ್ತಿತ್ತು. ಅದಕ್ಕೆ ಈ ಆ್ಯಪ್ ವಿರುದ್ಧ ಎಲ್ಲ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಕೇಂದ್ರ ಸರ್ಕಾರ ಆ್ಯಪ್ ಅನ್ನು ನಿಷೇಧಿಸಿತ್ತು. ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: 33 ವರ್ಷದ ನಂತರ ಹುಟ್ಟೂರಿನ ನಕ್ಷೆ ಬಿಡಿಸಿ ತಾಯಿ ಮಡಿಲು ಸೇರಿದ ಮಗ!
Advertisement
‘Bulli Bai’ app case : Mumbai Police has not revealed the identity of the suspect detained from Bengaluru yet, except for his age. Police have registered a case against unknown culprits under relevant sections of IPC and the IT Act.
— ANI (@ANI) January 3, 2022
Advertisement
ಪೊಲೀಸರು ಇಲ್ಲಿಯವರೆಗೂ ವಶಕ್ಕೆ ಪಡೆದುಕೊಂಡಿರುವ ಶಂಕಿತ ವ್ಯಕ್ತಿಯ ವಯಸ್ಸನ್ನು ಹೊರತುಪಡಿಸಿ, ಆ ವ್ಯಕ್ತಿಯ ಯಾವ ಗುರುತನ್ನು ಬಹಿರಂಗಪಡಿಸಿಲ್ಲ. ಪೊಲೀಸರು ಈ ಅಪರಿಚಿತ ಆರೋಪಿಗಳ ವಿರುದ್ಧ ಐಪಿಸಿ ಮತ್ತು ಐಟಿ ಕಾಯ್ದೆಗೆ ಸಂಬಂಧಿಸಿದಂತೆ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
Advertisement
Mumbai Police Cyber Cell has detained a 21-year-old man from Bengaluru in connection with ‘BulliBai’ app, say police.
— ANI (@ANI) January 3, 2022
Advertisement
ಕಳೆದ ವರ್ಷ ಸುಲ್ಲಿ ಡೀಲ್ಸ್ ಹೆಸರಿನಲ್ಲಿ ಇದೇ ರೀತಿ ಮುಸ್ಲಿಂ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಿ ಅವರನ್ನು ಹರಾಜಿಗೆ ಇಡುವ ರೀತಿ ಬಿಂಬಿಸುವ ವೆಬ್ ಪೋರ್ಟಲ್ ಕಾಣಿಸಿಕೊಂಡಿತ್ತು. ಮಹಿಳೆಯರ ಸಾಮಾಜಿಕ ಜಾಲತಾಣದಲ್ಲಿರುವ ಫೋಟೋವನ್ನು ಡೌನ್‍ಲೋಡ್ ಮಾಡಿ ಆ್ಯಪ್‍ನಲ್ಲಿ ಬಳಕೆ ಮಾಡಲಾಗಿತ್ತು. ಇದನ್ನೂ ಓದಿ: ಸಣ್ಣ ವಯಸ್ಸಿನಿಂದಲೇ ಸೇವಾ ಮನೋಭಾವವನ್ನು ಬೆಳೆಸಬೇಕು: ಎಂ.ವೆಂಕಯ್ಯ ನಾಯ್ಡು