ಬೀಜಿಂಗ್: 33 ವರ್ಷಗಳ ನಂತರ ತನ್ನ ನೆನಪಿನ ಶಕ್ತಿಯಿಂದ ಹುಟ್ಟೂರಿನ ನಕ್ಷೆಯನ್ನು ಬಿಡಿಸಿ ಮತ್ತೆ ತನ್ನ ತಾಯಿಯ ಮಡಿಲನ್ನು ಮಗ ಸೇರಿದ ಭಾವನಾತ್ಮಕ ಘಟನೆ ಚೀನಾದಲ್ಲಿ ನಡೆದಿದೆ.
ಚೀನಾದ ಹಳ್ಳಿಯಿಂದ ಅಪಹರಣಕ್ಕೊಳಗಾದ ಲಿ ಜಿಂಗ್‍ವೀ, 33 ವರ್ಷಗಳ ನಂತರ ತನ್ನ ನೆನಪಿನ ಶಕ್ತಿಯಿಂದ ನಕ್ಷೆಯನ್ನು ಬಿಡಿಸಿದ್ದಾರೆ. ಅದು ಅಲ್ಲದೇ ಇವರಿಗೆ ಪೊಲೀಸರು ಸಹಾಯ ಮಾಡಿದ್ದು, ನಕ್ಷೆಯ ಸಹಾಯದಿಂದ 33 ವರ್ಷದ ನಂತರ ತನ್ನ ತಾಯಿಯನ್ನು ಮತ್ತೆ ಸೇರಿದ್ದಾರೆ. ಇದನ್ನೂ ಓದಿ: ಸಣ್ಣ ವಯಸ್ಸಿನಿಂದಲೇ ಸೇವಾ ಮನೋಭಾವವನ್ನು ಬೆಳೆಸಬೇಕು: ಎಂ.ವೆಂಕಯ್ಯ ನಾಯ್ಡು
Advertisement
Advertisement
ಪ್ರಸ್ತುತ ಲಿ ಜಿಂಗ್‍ವೀ ಬಿಡಿಸಿದ್ದ ತನ್ನ ಹಳ್ಳಿಯ ನಕ್ಷೆ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಈಗ ಅದು ಸಖತ್ ವೈರಲ್ ಆಗುತ್ತಿದೆ.
Advertisement
ಏನಿದು ಘಟನೆ?
1989ರಲ್ಲಿ ನೈರುತ್ಯ ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿ ಮಕ್ಕಳನ್ನು ಅಪಹರಿಸಿದಾಗ ಆ ಕಳ್ಳಸಾಗಣೆಯಲ್ಲಿ ಲಿ ಜಿಂಗ್‍ವೀ ಸಹ ಇದ್ದರು. ಆಗ ಅವರಿಗೆ ಕೇವಲ ನಾಲ್ಕು ವರ್ಷ. ಈಗ ಅವರಿಗೆ 37 ವರ್ಷವಾಗಿದೆ. ಆದರೂ, ತನ್ನ ಹಳ್ಳಿಯನ್ನು ಇನ್ನೂ ನೆನಪಿಟ್ಟುಕೊಂಡಿದ್ದಾರೆ. ಅದು ಅಲ್ಲದೇ ತನ್ನ ಹುಟ್ಟೂರಿನ ನಕ್ಷೆಯನ್ನು ಬರೆದು ಅದನ್ನು ಬಳಸಿಕೊಂಡು ತನ್ನ ಸ್ವತ ಕುಟುಂಬವನ್ನು ಸೇರಿದ್ದಾರೆ.
Advertisement
ಈ ಕುರಿತು ಪ್ರತಿಕ್ರಿಯಿಸಿದ ಲಿ ಜಿಂಗ್‍ವೀ, ನನ್ನನ್ನು ಆಟಿಕೆ ತೋರಿಸಿ ಕಳ್ಳರು ಅಪಹರಿಸಿದರು. ನಂತರ ಇಲ್ಲಿಂದ 1,000 ಮೈಲುಗಳಷ್ಟು ದೂರದಲ್ಲಿದ್ದ ಇನ್ನೊಂದು ಕುಟುಂಬಕ್ಕೆ ಮಾರಿದರು. ಆದರೆ ಪ್ರತಿದಿನ ನಾನು ನನ್ನ ಮನೆಯನ್ನು ನೆನಪಿಸಿಕೊಳ್ಳುತ್ತಿದ್ದೆ. ನನ್ನ ಊರನ್ನು ನೋಡಬೇಕು ಎಂದು ಪ್ರತಿಬಾರಿಯೂ ಆಲೋಚಿಸುತ್ತಿದೆ. ನಂತರ ತುಂಬಾ ಆಲೋಚಿಸಿ ಈ ನಕ್ಷೆಯನ್ನು ಬಿಡಿಸಿದೆ ಎಂದು ವಿವರಿಸಿದರು.
ಡಿಸೆಂಬರ್‌ನಲ್ಲಿ, ಲಿ ಜಿಂಗ್‍ವೀ ಅವರು ತಾವು ಬಿಡಿಸಿದ ನಕ್ಷೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದರು. ಲಿ ಜಿಂಗ್‍ವೀ ಅವರು ಆ ವೇಳೆ ಅಪಹರಣಕ್ಕೊಳಗಾದ ಮಕ್ಕಳ ಬಗ್ಗೆ ವಿಚಾರಿಸಿದರು. ಅವರನ್ನು ತನ್ನ ಕುಟುಂಬ ಹುಡುಕುವಂತೆ ಸಹಾಯಕ್ಕಾಗಿ ಮನವಿ ಮಾಡಿದರು.
ಈ ವೇಳೆ ಲಿ ಜಿಂಗ್‍ವೀ ಅವರ ಸಹಾಯಕ್ಕೆ ಪೊಲೀಸರು ಬಂದಿದ್ದು, ತನಿಖೆಯನ್ನು ಪ್ರಾರಂಭಿಸಿದರು. ಅಂತಿಮ ಫಲವೆಂಬಂತೆ ಅವರಿಗೆ ತನ್ನ ಊರು ಮತ್ತು ತಾಯಿ ಸಿಕ್ಕಿದ್ದಾರೆ. ಈ ಭಾವನಾತ್ಮಕ ದೃಶ್ಯವನ್ನ ಸೆರೆಹಿಡಿಯಲಾಗಿದ್ದು, ಈ ವೀಡಿಯೋದಲ್ಲಿ ತಾಯಿಯನ್ನು ನೋಡಿದ ಲಿ ಜಿಂಗ್‍ವೀ ಅಳುತ್ತ ನೆಲಕ್ಕೆ ಬಿಳುತ್ತಾರೆ. ನಂತರ ಆತನ ತಾಯಿ ಕೊನೆಗೂ ನನ್ನ ಮಗನನ್ನು ನಾನು ನೋಡಿದೆ ಎಂದು ದುಃಖಿತರಾಗಿದ್ದಾರೆ. ಇದನ್ನೂ ಓದಿ: ಗಂಗಾಕಲ್ಯಾಣ ಯೋಜನೆಯಲ್ಲಿ ಸಾವಿರಾರು ಕೋಟಿ ಅಕ್ರಮ
ಪ್ರಸ್ತುತ ಲಿ ಜಿಂಗ್‍ವೀ ಅವರು ಮದುವೆಯಾಗಿದ್ದು, ಮಕ್ಕಳನ್ನು ಹೊಂದಿದ್ದಾರೆ. ಈಗ ಆ ಮಕ್ಕಳಿಗೆ ಇವರು ನಕ್ಷೆಯಲ್ಲಿ ತನ್ನ ಹುಟ್ಟೂರು ಹಿಂದೆ ಹೇಗಿತ್ತು ಎಂದು ತೋರಿಸಿದರು. ತನ್ನನ್ನು ಖರೀದಿಸಿದ ಕುಟುಂಬದ ವಿರುದ್ಧ ಕ್ರಮ ತೆಗದುಕೊಳ್ಳಲು ಹಿಂದೇಟು ಹಾಕಿದ ಅವರು, ಅವರು ನನಗೆ ಜೀವನ ಮೌಲ್ಯವನ್ನು, ಮನುಷ್ಯತ್ವವನ್ನು ಕಲಿಸಿದ್ದಾರೆ ಎಂದು ಹೇಳಿದ್ದಾರೆ.
ಚೀನಾದಲ್ಲಿ ಕಳ್ಳಸಾಗಣೆ ಮತ್ತು ಮಕ್ಕಳ ಅಪಹರಣವು ಗಂಭೀರ ಸಮಸ್ಯೆಯಾಗಿದ್ದು, ಹಿಂದೆ ಪ್ರತಿ ಕುಟುಂಬಕ್ಕೆ ಮಕ್ಕಳ ಸಂಖ್ಯೆಯ ಮೇಲೆ ಮಿತಿಯನ್ನು ಹೇರಲಾಗಿತ್ತು. ಅದು ಅಲ್ಲದೇ ಹುಡುಗರಿಗೆ ಸಾಂಪ್ರದಾಯಿಕವಾಗಿ ಆದ್ಯತೆ ಹೆಚ್ಚಿತ್ತು. ಈ ಕಾರಣಕ್ಕೆ ಮಕ್ಕಳ ವ್ಯಾಪಾರ ಹೆಚ್ಚಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.