– 4.75 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ಎಗರಿಸಿದ್ದ ಆರೋಪಿ
ಮುಂಬೈ: ಟಿಕ್‍ಟಾಕ್ ಆಪ್‍ನಲ್ಲಿ 9 ಲಕ್ಷ ಹಿಂಬಾಲಕರನ್ನು ಹೊಂದಿದ್ದ ಟಿಕ್‍ಟಾಕ್ ಸ್ಟಾರ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಪೂರ್ವ ಮುಂಬೈನ ಕುರ್ಲಾ ನಿವಾಸಿ ಅಭಿಮನ್ಯು ಗುಪ್ತಾ ಬಂಧಿತ ಟಿಕ್‍ಟಾಕ್ ಸ್ಟಾರ್. ಆರೋಪಿ ಅಭಿಮನ್ಯು ಜುಹಾ ಪ್ರದೇಶ ಮನೆಯಲ್ಲಿ ಜನವರಿ ತಿಂಗಳು ಕಳ್ಳತನ ಮಾಡಿ, ಪರಾರಿಯಾಗಿದ್ದ.
ದುಷ್ಕರ್ಮಿಗಳು ತಮ್ಮ ಮನೆ ದರೋಡೆ ಮಾಡಿದ್ದಾರೆ. ಮನೆಯಲ್ಲಿದ್ದ ಚಿನ್ನಾಭರಣ, ಒಂದು ಮೊಬೈಲ್ ಸೇರಿದಂತೆ 4.75 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ್ದಾರೆ ಎಂದು ದಂಪತಿ, ಜುಹು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರಿಗೆ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಲಭ್ಯವಾಗಿದ್ದವು. ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಆರೋಪಿ ಗುಪ್ತಾನನ್ನು ಮೇ 8ರಂದು ಬಂಧಿಸಿದ್ದರು. ಆದರೆ ಗುಪ್ತಾ, ನಾನು ದರೋಡೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದ.
ಪ್ರಕರಣದ ಕುರಿತು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಗುಪ್ತಾ ಸತ್ಯ ಒಪ್ಪಿಕೊಂಡಿದ್ದಾನೆ. ಇವು ನನ್ನ ಪತ್ನಿಯ ಚಿನ್ನಾಭರಣಗಳು. ಸದ್ಯಕ್ಕೆ ನಿನ್ನ ಹತ್ತಿರ ಇಟ್ಟುಕೊ ಎಂದು ಕಳ್ಳತನ ಮಾಡಿದ್ದ ಒಡವೆಗಳನ್ನು ಗೆಳೆಯನಿಗೆ ನೀಡಿದ್ದೆ ಎಂದು ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಆರೋಪಿ ಗೆಳೆಯನ ಬಳಿಯಿದ್ದ ಚಿನ್ನಾಭರಣ, ಮೊಬೈಲ್ ಸೇರಿದಂತೆ ದರೋಡೆ ಮಾಡಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಗುಪ್ತಾ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಆತನನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸ್ ಅಧಿಕಾರಿ ಹರಿ ಬಿರಾದಾರ್ ತಿಳಿಸಿದ್ದಾರೆ.